ಉ.ಕ ಸುದ್ದಿಜಾಲ ಕಾಗವಾಡ :

ಖಿಳೆಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಕೂಡಲೇ ಪೂರ್ಣಗೊಳ್ಳದಿದ್ದರೆ ಬೆಂಗಳೂರಲ್ಲಿ  ಧರಣಿ ಕುಳಿತು ಕೆಲಸ ಮಾಡಿ ಕೊಡುತ್ತೇನೆ ಎಂದು ಕಾಗವಾಡ ಶಾಸಕ ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.

ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ  ಕೃಷ್ಣಾ ಕೋ ಕ್ರೆಡಿಟ್ ಸೊಸಾಯಿಟಿ, ಅಥಣಿ ಶುಗರ  ಲಿಮಿಟೆಡ್ ಕಬ್ಬು ಕಚೇರಿ ಹಾಗೂ ಕೃಷ್ಣಾ ಆಗ್ರೋ ಸರ್ವಿಸ್ ಗುಂಡೇವಾಡಿ ಗ್ರಾಮದಲ್ಲಿ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಬಸವೇಶ್ವರ ಏತ ನೀರಾವರಿ ಯೋಜನೆ ಆಗದಿದ್ದರೆ ವಿಧಾನ ಸಭೆಯಲ್ಲಿ ಧರಣಿ ಕುಳಿತು ಆತರು ಕೆಲಸ ಮಾಡಿಕೊಂಡು ಬರುತ್ತೇನೆ ಎಂದು ಹೇಳಿದರು.

ಕೃಷ್ಣಾ ಕೋ ಕ್ರೆಡಿಟ್ ಸೋಸಾಯಿಟಿ ಇವತ್ತಿಗೆ 26 ವರ್ಷ ಪೂರೈಸಿದೆ. ರೈತರ ಹಾಗೂ ಬಡವರು ಮುಂದೆ ಬರಬೇಕಾದರೆ ಸಹಕಾರಿ ಬ್ಯಾಂಕ ಉಪಯೋಗಿದೆ.  ಈ ಭಾಗದ 23 ಕೆರೆ ತುಂಬು ಯೋಜನೆ ಹಾಗೂ ಖಿಳೆಗಾಂವ ಬಸವೇಶ್ವರ ಯಾತನೀರಾವರಿ ಯೋಜನೆ ಕೂಡಲೇ ಪೂರ್ಣ ಮಾಡುತ್ತೇನೆ ಎಂದರು. ಕಾಗವಾಡ ವಿಧಾನ ಸಭಾ ಮತ ಕ್ಷೇತ್ರದಲ್ಲಿ  ಹೆಚ್ಚು ಕೆಲಸ ತಂದು ಒಂದು ಮಾದರಿ ವಿಧಾನಸಭಾ  ಮತಕ್ಷೇತ್ರ ಮಾಡುತ್ತೇನೆ. ನಾನು ಹೆಚ್ಚು ಶಿಕ್ಷಣ ಹಾಗೂ ನೀರಾವರಿ ಬಗ್ಗೆ ಕಾಳಜಿ ಹೆಚ್ಚು ಇರುತ್ತದೆ ಎಂದರು.

ನಾನು ಯಾವಾಗಲು ಕ್ಷೇತ್ರದ ಜನರನ್ನು ಮರೆಯಲು ಸಾಧ್ಯವಿಲ್ಲ. ನಿಮ್ಮ ಆಶೀರ್ವಾದದಿಂದ ಶಾಸಕ ಹಾಗೂ ಸಚಿವನಾಗಿರುತ್ತೇನೆ. ಮುಂದೆ ಯಾವುದೇ ಕಾರಣಕ್ಕೂ ನಿಮ್ಮ ಋಣ ಮರೆಯಲ್ಲೂ ಸಾಧ್ಯವಿಲ್ಲ ಎಂದರು.
  
ಕೌಲಗುಡ್ಡ ಅಮ್ಮರೇಶ್ವರ ಮಹಾರಾಜರು ಮಾತನಾಡಿ ಶ್ರೀಮಂತ ಪಾಟೀಲ ಹಿಂದೆ ರೈತರ ಕಷ್ಟ ನೋಡಿ ಇಂದು ಹಲವಾರು ಸಕ್ಕರೆ ಕಾರ್ಖಾನೆಗಳು ಪ್ರಾರಂಭಿಸಿದ್ದಾರೆ. ಸುಮಾರು 20 ವರ್ಷದ ಹಿಂದೆ ಈ ಭಾಗದ ಜನರಿಗೆ ನೀರಿನ ಸಮಸ್ಯೆ‌ ಇತ್ತು. ಇಂದು ಶ್ರೀಮಂತ ಪಾಟೀಲ ಏತ ನೀರಾವರಿ ಯೋಜನೆಯನ್ನು ತಂದು ಹಸಿರು ಕ್ರಾಂತಿ ಹರಿಕಾರವಾಗಿರುತ್ತಾರೆ ಎಂದು ಹೇಳಿದ್ದರು. ಕೂಡಲೇ ಬಸವೇಶ್ವರ ಯತ ನೀರಾವರಿ ಯೋಜನೆ ಪೂರ್ಣ ಮಾಡಬೇಕೆಂದು ಹೇಳಿದರು. ಬಸವೇಶ್ವರ ಏತ ನೀರಾವರಿ ಸಲುವಾಗಿ ನಾವು ಸಹಿತ ನೀವು ಕರೆದಲ್ಲಿ ಬರಲು ಸಿದ್ದ ಎಂದರು.

ಈ ವೇಳೆ ಚಿಕ್ಕೋಡಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿನಾಯಕ ಬಾಗಡಿ,  ಬಾಳಾಸಾಹೇಬ ಪಾಟೀಲ, ಅಪ್ಪಸಾಬ ಅವತಾಡೆ,  ಶ್ರೀನಿವಾಸ ಪಾಟೀಲ, ಸುಶಾಂತ ಪಾಟೀಲ, ನಾಗಪ್ಪ ಜತ್ತಿ, ಸಿದರಾಯ ತೇಲಿ, ಶಿವಾನಂದ ಗೋಲಭಾಂವಿ, ಪ್ರಕಾಶ ಡೊಳ್ಳಿ, ಬಹುಸಾಬ ಜಾಧವ, ಡಾ.ಆನಂದ ಗುಂಜಿಗೊಂವಿ,  , ರವಿ ಕಾಂಬಳೆ, ಸಂಭಾ ವೀರ, ಕಲ್ಲಪ್ಪ ಪಾಟೀಲ, ರಾಮಗೌಡ ಪಾಟೀಲ, ಡಾ ಕರೆಪ್ಪ ಮಂಟೂರ್, ಸಂಭಾ ವೀರ, ಧರೆಪ್ಪ ಕಾರಾಜನಗಿ, ಕಲ್ಲಪ್ಪ ಶಿಂಧೆ, ರಾವಸಾಬ ವೀರ ಸರ್, ತಮ್ಮಣ್ಣ ಕೂಪವಾಡ ಚನ್ನಪ್ಪ ನಂದಿವಾಲೆ,  ಬಾಬಣ್ಣ ಬಿಳ್ಳೂರ, ಮಾರುತಿ ಜಾಧವ, ಭೀರಪ್ಪ ಉಗರೆ, ಅಮರ  ಕಾಂಬಳೆ ಉಪಸ್ಥಿತರಿದ್ದರು.