ಉ.ಕ ಸುದ್ದಿಜಾಲ ಕಾಗವಾಡ :
ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಕಾಗವಾಡ್ ಶಾಸಕ ರಾಜು ಕಾಗೆ ಮಾಡಿದ ಭಾಷಣ ಎಲ್ಲೆಡೆ ವೈರಲ್ ಆಗುತ್ತಿದೆ. ಬಸವೇಶ್ವರ ಎತ ನೀರಾವರಿ ವಿಚಾರವಾಗಿ ಮಾತನಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ವೈರಲ್ ಆಯಿತು ರಾಜು ಕಾಗೆ ಚುನಾವಣಾ ಪೂರ್ವ ಭಾಷಣ, ಕಾಗೆ ಮಾತಿಗೆ ನೆಟ್ಟಿಗರು ಹೀಗಂದಿದೆಕೆ?
ಬಸವೇಶ್ವರ ಏತ್ ನೀರಾವರಿ ವಿಚಾರ ಮುಂದಿಟ್ಟುಕೊಡು ಚುನಾವಣಾ ಪ್ರಚಾರ ಮಾಡಿದ ರಾಜಕೀಯ ನಾಯಕರ ಮಾತು ಹುಸಿಯಾಯ್ತು ಅನ್ನೋ ಚರ್ಚೆಗಳು ಎಲ್ಲೆಡೆ ಸದ್ದು ಮಾಡುತ್ತಿವೆ.
ಕಳೆದ ಜುಲೈ ತಿಂಗಳಲ್ಲಿ ಕಾಲುವೆಗೆ ನೀರು ಬಿಡುವುದಾಗಿ ವೇದಿಕೆಯ ಮೇಲೆ ಭರವಸೆ ನೀಡಿದ ಶಾಸಕ ರಾಜು ಕಾಗೆ ಹುಸಿ ನುಡಿಗೆ ನೆಟ್ಟಿಗರು ಟ್ರೊಲ್ ಮಾಡುತ್ತಿದ್ದಾರೆ.
ಕಳೆದ ಮೂರು ದಶಕಗಳಿಂದ ನೀರಾವರಿ ಹೆಸರಲ್ಲೇ ಭಾಷಣ ಬಿಗಿಯುತ್ತಿರುವ ಚಾಣಾಕ್ಷ ನಾಯಕರ ಸರದಿಯಲ್ಲಿ ಈಗ ಶಾಸಕ ರಾಜು ಕಾಗೆ ಭಾಷನವು ಒಂದಾಗಿದೆ.
ಕಳೆದ ಚುನಾವಣೆಯಲ್ಲಿ ಬಸವೇಶ್ವರ ಏತ್ ನೀರಾವರಿಗೆ ಯೋಜನೆ ಕನಸು ನನಸಾಗಿಸುವ ಭರವಸೆ ಈಗ ಸುಳ್ಳಾಯ್ತು ಎಂದು ಜನ ಆಡಿಕೊಳ್ಳುತ್ತಿದ್ದಾರೆ.