ಉ.ಕ ಸುದ್ದಿಜಾಲ ಅಥಣಿ :
ಇವತ್ತು ನಾಮಪತ್ರ ಸಲ್ಲಿಸಲಾಗಿದೆ, ಚುನಾವಣೆ ಗೆಲ್ಲಲು ಸಾವಿರಾರು ಕಾರ್ಯಕರ್ತರು ಬೆಂಬಲಿಗರು ಬೆಂಬಲ ನೀಡಿದ್ದಾರೆ ಅಥಣಿ ಬಿಜೆಪಿ ಕೋಟೆ ಛಿದ್ರ ಆಗುತ್ತೊ ಇಲ್ಲೊ ಗೊತ್ತಿಲ್ಲಾ ನನ್ನ ಗೆಲುವು ಮಾತ್ರ ನಿಶ್ಚಿತ ಎಂದು ಅಥಣಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಹಶೀಲ್ದಾರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಲಕ್ಷ್ಮಣ ಸವದಿ ರಾಜ್ಯದ್ಯಾಂತ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಲಿದ್ದೇನೆ. ಅಥಣಿಯ ನಲ್ಲಿ 11 ಜನ ಕಾಂಗ್ರೆಸ್ ಟಿಕೇಟ್ ಆಕಾಂಕ್ಷೆಗಳಿದ್ರು. ಎಲ್ಲರೂ ಯಾವುದೆ ಭಿನ್ನಮತ ಇಲ್ಲದೆ ನನಗೆ ಬೆಂಬಲವಾಗಿ ನಿಂತಿದ್ದಾರೆ.
ರಮೇಶ್ ಜಾರಕಿಹೋಳಿ ಸಭೆ ಸಭೆ ಮೇಲೆ ನಡೆಸುತ್ತಿರುವ ವಿಚಾರ ತಮ್ಮ ಅಭ್ಯರ್ಥಿ ಗೆಲುವಿಗಾಗಿ ಸಭೆ ನಡೆಸಿ ಪ್ರಯತ್ನ ಪಡುತ್ತಾರೆ ಎಂದರು.
RSS ಹಿಡಿತದಲ್ಲಿ ನೀವು ಗೆಲುವು ಸಾದಿಸುತ್ತಿರಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು RSS ನಲ್ಲಿ ನನ್ನ ಹಿತೈಷಿಗಳಿದ್ದಾರೆ ಆಂತರಿಕವಾಗಿ ನನ್ನ ಜೋತೆಗೆ ಇದ್ದಾರೆ. ಗುಪ್ತ ಮತದಾನ ಇರೋದರಿಂದ ಅವರು ಸಹ ಗುಪ್ತವಾಗಿ ನನಗೆ ಮತ ಹಾಕುತ್ತಾರೆ. ನೂರಕ್ಕೆ ನೂರರಷ್ಟು RSS ನವರು ನನಗೆ ಮತ ಹಾಕುತ್ತಾಎ ಎಂದರು.