ಉ.ಕ ಸುದ್ದಿಜಾಲ ಹುಕ್ಕೇರಿ‌ :

ಹುಕ್ಕೇರಿ ತಹಶಿಲ್ದಾರ ಕಚೇರಿಗೆ ತೆರಳಿ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ ಸತೀಶ ಜಾರಕಿಹೋಳಿ ಯಾವುದೇ ಕಾರ್ಯಕರ್ತರ ಜೊತೆ ಮೆರವಣಿಗೆ ಮಾಡದೆ ಸಾಮಾನ್ಯವಾಗಿ ಕೇಲ ಕಾರ್ಯಕರ್ತರ ಜೊತೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಹಶೀಲ್ದಾರ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ನೀವು ಮೌಢ್ಯ ವಿರೋಧ ಮಾಡಿದ್ರೆ ಬಿಜೆಪಿಯವರು ನಿಮ್ಮನ್ನ ವಿರೋಧ ಮಾಡ್ತಿದ್ದಾರೆ ಎಂದು ಮಾಧ್ಯದವರ ಪ್ರಶ್ನೆಗೆ ಉತ್ತರಿಶಿದ ಸತೀಶ ಜಾರಕಿಹೋಳಿ ಅದು ಸ್ವಾಭಾವಿಕ ರಾಜಕೀಯ ವ್ಯವಸ್ಥೆಯಲ್ಲಿ ವಿರೋಧ ಮಾಡಲೇಬೇಕಾಗುತ್ತದೆ. ಅವರು ಬೇರೆಯವರಿಗೂ ವಿರೋಧ ಮಾಡ್ತಾರೆ ನಮಗೊಬ್ಬರಿಗೆ ವಿರೋಧ ಮಾಡಲ್ಲ ಎಂದರು.

ಕರ್ನಾಟಕದಲ್ಲಿ ಟಾಪ್ ಟೆನ್ ನಲ್ಲಿ ಬರುವ ವಿಶ್ವಾಸ ವ್ಯಕ್ತಪಡಿಸಿದ ಸತೀಶ ಜಾರಕಿಹೊಳಿ, ಯತ್ನಾಳ ಅವರ ಸತೀಶ ಜಾರಕಿಹೊಳಿ ಒಬ್ಬ ಹಿಂದೂ ವಿರೋಧಿ ಎಂಬ ಹೇಳಿಕೆ ವಿಚಾರ. ಈ ಬಾರಿ ಎಷ್ಟು ವೋಟ್ ಬರುತ್ತೆ ಎಂದು ಗೊತ್ತಗುತ್ತದೆ ನಮ್ಮ ಪರವಾಗಿ ಎಷ್ಟು ಹಿಂದುಗಳಿದ್ದಾರೆ ಎಂದು ಗೊತ್ತಾಗುತ್ತದೆ.

ಮೇ 13 ನೇ ತಾರೀಕು 11 ಗಂಟೆಗೆ ಉತ್ತರ ಕೊಡ್ತಿವಿ ಮತಗಳ ಮೂಲಕವೇ ಉತ್ತರ ಕೊಡ್ತಿವಿ ಎಂದು ಬಿಜೆಪಿ ಟಾಂಗ್ ನೀಡಿದ ಸತೀಶ, ಅಶೋಕ್ ಪೂಜಾರಿಯವರ ಮನೆಗೆ ಭೇಟಿ ನೀಡಿ ಸಂದಾನ ಮಾಡಿದ ವಿಚಾರ, ಅವರೂ ಸಹ ಒಬ್ಬ ಆಕಾಂಕ್ಷಿಯಾಗಿದ್ದರು ಎಲ್ಲಾ ಕಡೆ ಸಂಧಾನ ಮಾಡುತ್ತಿದ್ದೆವೆ ಎಂದರು.

ಅಥಣಿ ಕಾಗವಾಡಕ್ಕೆ ಹೋಗಿ ಪ್ರಚಾರ ಮಾಡ್ತಿವಿ 18 ಕ್ಷೇತ್ರಗಳಲ್ಲಿ ನಮ್ಮ ಜವಾಬ್ದಾರಿ‌ ಇದೆ ಜಾರಕಿಹೊಳಿ ಸಹೋದದರ ಹೊಂದಾಣಿಕೆಯಿಂದ ಮಾರುತಿ ಅಷ್ಟಗಿಗೆ ಟಿಕೆಟ್ ಕೈ ತಪ್ಪಿತು ಎಂಬ ಆರೋಪ ವಿಚಾರ, ಅವನ ಪಕ್ಷ ಅವನನ್ನ ಕೇಳಬೇಕು ಅಮೀತ್ ಷಾ ನನ್ನ ಮಾತು ಕೇಳಲ್ಲ,ಅವರದೆ ಆದಂತ ಆರ್ ಎಸ್ ಎಸ್  ಪಡೆ ಇದೆ,

ಅವರದೆ ಆದ ಲೆಕ್ಕಾಚಾರ ಇದೆ ನಮಗೆ ಕೇಳಿ ಅವರಿಗೆ ಟಿಕೆಟ್ ಕೊಡೊದಾದ್ರೆ ಎಲ್ಲ ಕಡೆಗೂ ಹಂಗೆ ಆರಿಸಿ ಬರ್ತಿದ್ವಿ. ಕರ್ನಾಟದಲ್ಲಿ ಹತ್ತು ಅತ್ಯಂತ ಲೀಡ್ ಪಡೆಯುವ ಕ್ಷೇತ್ರಗಳಲ್ಲಿ ಯಮಕನಮರಡಿಯೂ ಸಹ ಒಂದಾಗಿರುತ್ತೆ elಎಂದರು.

ಅಥಣಿಗೆ ಮೋದಿ ಬರುವ ವಿಚಾರ,  ಮೋದಿ ಬರಲಿ ಎಲೆಕ್ಷನ್ ಗೆಲ್ಲೋಕೆ ಎಲ್ಲಾರೂ ಪ್ರಯತ್ನ ಮಾಡ್ತಾರೆ ಮತ್ತೆ ಕ್ಷೇತ್ರಕ್ಕೆ ರಾಜ್ಯ ನಾಯಕರು ಪ್ರಚಾರಕ್ಕ ಬರ್ತಾರಾ ಎಂಬ ಪ್ರಶ್ನೆ, ಇನ್ನು ಯಾರೂ ಸಹ ಪ್ರಚಾರಕ್ಕೆ ಬರೋದು ಬೇಡ ಅದರ ಅವಶ್ಯಕತೆ ಇಲ್ಲ ಎಂದ ಸತೀಶ ಜಾರಕಿಹೋಳಿ.