ಉ.ಕ ಸುದ್ದಿಜಾಲ ಅಥಣಿ :
ಸೊಕ್ಕಿನ ಮನುಷ್ಯ ಸೋಲು ಕಾಣಬೇಕು ಸವದಿ ವಿರುದ್ಧ ರಮೇಶ ಜಾರಕಿಹೊಳಿ ವಾಗ್ದಾಳಿ ಲಕ್ಷ್ಮಣ್ ಸವದಿ ಬಿಜೆಪಿ ಪಕ್ಷಕ್ಕೆ ಮೋಸಮಾಡಿ ಹೋಗಿದ್ದಾನೆ ನಮ್ಮ ಪಕ್ಷ ಬಿಟ್ಟು ಹೋಗಿದ್ದಾನೆ ಸ್ವಚ್ಚವಾಗಿದೆ ಸವದಿ ಎಲ್ಲರಿಗೂ ಮೋಸ ಮಾಡಿದ್ದಾರೆ ಬಿ ಎಲ್ ಪಾಟೀಲ್ ಅವರಿಗೆ ಮೋಸ ಮಾಡಿದ,
ಲೀಲಾವತಿ ಆರ್ ಪ್ರಸಾದ್ ಅವರಿಗೆ ಮೊಸ ಮಾಡಿದ, ಸಂತೋಷ್ ಅವರಿಗೆ ಮೊಸ ಮಾಡಿದ್ದಾರೆ ದಿ ಉಮೇಶ್ ಕತ್ತಿ ಅವರಿಗೆ ಮೋಸ ಮಾಡಿ ಬಿಜೆಪಿ ಪಕ್ಷಕ್ಕೂ ಮೊಸ ಮಾಡಿ ಸುಮನ್ನೇ ಅಳುತ್ತಾನೆ ಎಂದು ರಮೇಶ್ ಜಾರಕಿಹೊಳಿ ಲಕ್ಷ್ಮಣ್ ಸವದಿ ವಿರುದ್ಧ ಮತ್ತೆ ಹರಿಹಾಯ್ದರು.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಇಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಗಿರೀಶ್ ಬುಟಾಳಿ ಹಾಗೂ ಕನ್ನಡ ಪರ ಹೋರಾಟಗಾರ ರವಿ ಪೂಜಾರಿ ಅವರು ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಭೆ ಉದ್ದೇಶಿಸಿ ಮಾತನಾಡಿದರು. ಸವದಿ ಎಲ್ಲರಿಗೂ ಮೋಸ ಮಾಡಿದ್ದಾನೆ ಪಕ್ಷದಲ್ಲಿ ಎಲ್ಲಾ ಅಧಿಕಾರಿಗಳನ್ನು ಅನುಭವಿಸಿ ಪಕ್ಷವನ್ನು ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದಲ್ಲಿ ಮಹೇಶ್ ಕುಮಠಳ್ಳಿ ಹಾಗೂ ನನಗೆ ಮೋಸವಾಗಿದೆ ನಾವು ಪಕ್ಷ ನಿಷ್ಠೆಯಿಂದ ಪಕ್ಷದಲ್ಲಿ ಇದ್ದೇವೆ ಆದರೆ ಲಕ್ಷ್ಮಣ ಸವದಿ ಎಲ್ಲಾ ಅಧಿಕಾರ ಅನುಭವಿಸಿ ಪಕ್ಷವನ್ನು ಬಿಟ್ಟಿದ್ದಾರೆ ಅವರನ್ನು ನೀವು ನಂಬಬೇಟಿ ನೀವು ಅವನಿಗೆ ದಯವಿಟ್ಟು ಬುದ್ದಿ ಕಲಿಸಬೇಕು ಅವರು ಎಷ್ಟೇ ಖರ್ಚು ಮಾಡಿದರು ನೀವು ಮಾತ್ರ ಅವನಿಗೆ ತಕ್ಕ ಉತ್ತರ ನೀಡಬೇಕು.
ನಾನು ಈ ವಾರದಲ್ಲಿ ಐದನೇ ಸಲ ಅಥಣಿಗೆ ಭೇಟಿ ನೀಡುತ್ತಿದ್ದೇನೆ ಸೊಕ್ಕಿನ ಮನುಷ್ಯ ಸೋಲು ಕಾಣಬೇಕು ಉದ್ದು ಅಂಗಿ, ಗಿಡ್ಡ ಆಗಬೇಕು ಅಥಣಿ ಜನತೆ ಶಕ್ತಿಯಿಂದ ಕಾಂಗ್ರೆಸ್ ಅಭ್ಯರ್ಥಿ ಸೋಲು ಆಗಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.
೨೦೧೮ ರಿಂದ ಸವದಿ ಎಲ್ಲಾ ಕಡೆ ಕೈ ಅಡಿಸುತಿದ್ದಾನೆ ನಾನು ಗಟ್ಟಿಯಾಗಿ ನಿಂತಿದ್ದೇವೆ ನಮ್ಮ ಪಕ್ಷ ಸ್ವಚ್ಚತೆಯಾಗಿದೆ ನಮ್ಮ ಮೇಲಿನ ಪೀಡಾ ಹೋಗಿದೆ ಅಥಣಿ ಭಾಗದ ಕೆಲಸಗಳನ್ನು ಮಾಡಲಾಗುವುದು ಸಹಕಾರ ಸೊಸೈಟಿ ಗಳಲ್ಲಿ ತುಂಬಾ ಅವ್ಯವಹಾರ ಆಗಿದೆ ಇದರಿಂದಾಗಿ ನಾವು ಅಧಿಕಾರಕ್ಕೆ ಬಂದ್ರೆ ತನಿಖೆ ಮಾಡಲಾಗುವುದು.
ಡಿಸಿಸಿ ಬ್ಯಾಂಕ್ ಆಯ್ಕೆ ಸಂದರ್ಭದಲ್ಲಿ ನಾವು ಅವನ್ನು ಆಯ್ಕೆ ಮಾಡಿ ತಪ್ಪು ಮಾಡಿದ್ದೇವೆ ಇದರಿಂದಾಗಿ ಎಲ್ಲಾ ಸಹಕಾರಿ ಸಂಘಗಳ ಚುನಾವಣೆ ಮತ್ತೋಮ್ಮೆ ಮಾಡಲಾಗುವುದು ನಾನು ತುಂಬಾ ದೊಡ್ಡ ಮನುಷ್ಯ ಎಂದು ಭಯ ಪಟ್ಟಿದ್ದೆ ಸವದಿ ಬೋಗಸ್ ಇದ್ದಾನೆ ಎಂದು ಅರ್ಥ ಆಯ್ತು ಎಂದು ಹೇಳಿದರು.
ಅಥಣಿಯಲ್ಲಿ ವಿಜಯ ಪತಾಕೆ ಹಾರಿಸುವುದು ಶತ ಸಿದ್ಧ ಡಿಸಿಎಂ ಮಾಡಿರುವ ಪಕ್ಷವನ್ನು ಒದ್ದು ಹೋಗಿದ್ದಾನೆ ಅವನ್ನು ಸೋಲಿಸುವುದುಕ್ಕೆ ನೀವು ನಮ್ಮ ಜೊತೆ ಕೈ ಜೋಡಿಸಿ ಮತ್ತೋಮ್ಮೆ ಅಧಿಕಾರಿಕ್ಕೆ ಬಿಜೆಪಿ ಪಕ್ಷವನ್ನು ಗೆಲ್ಲುವುದು ಎಂದು ಕರೆ ನೀಡಿದರು.