ಉ.ಕ ಸುದ್ದಿಜಾಲ ಕಾಗವಾಡ :

ಮನೆ, ಕಿರಾಣಿ ಅಂಗಡಿಗಳಲ್ಲೂ ಮದ್ಯ;ಅಕ್ರಮದ ಅಡ್ಡೆಯಾದ ಅಬಕಾರಿ ಇಲಾಖೆ, ಅಬಕಾರಿ ಇಲಾಖೆ ಎಷ್ಟೊಂದು ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟಕ್ಕೆ ಸಾಥ್ ನೀಡುತ್ತಿದೆ. ಹೀಗೆ ರಾಜಾರೋಷವಾಗಿ ಸಾರಾಯಿ‌ ಮಾರಾಟ ಮಾಡುತ್ತಿದೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ ಹೇಳುತ್ತೆ ನೋಡಿ.

ಒಬ್ಬ ಕಿರಾಣಿ ಅಂಗಡಿಯಲ್ಲಿ ಮಾರಾಟ ಮಾಡಿದ್ರೆ ಮತ್ತೊಬ್ಬ ಮನೆಯಲ್ಲಿಯೆ ಅಕ್ರಮ ಮದ್ಯದ ಅಡ್ಡೆಮಾಡಿಕೊಂಡಿದ್ದಾನೆ. ನಾವೇನು ಕಮ್ಮಿ ಇಲ್ಲ ಅನ್ನೋ ಹಾಗೆ ಮತ್ತೊಬ್ಬ ರಾಜಾರೋಷವಾಗಿ ಯಾವುದೆ ಪರವಾನಗಿ ಇಲ್ಲದೆ ರಸ್ತೆ ಬದಿ ಅಂಗಡಿ ಹಾಕಿ ಮದ್ಯ ಮಾರಾಟ ಮಾಡುತ್ತಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿ ಅಬಕಾರಿ ಇಲಾಖೆ ವ್ಯಾಪ್ತಿಯ ಕಾಗವಾಡ ಹಾಗೂ ಶೇಡಬಾಳ ಹೊರವಲಯಗಳಲ್ಲಿ ಎಲ್ಲಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ. ಆದರೆ ಅಬಕಾರಿ ಇಲಾಖೆ ಯಾವುದೆ ಕ್ರಮ ಕೈಗೊಳ್ಳದೆ ಜಾಣಕುರಡರಂತಿರೋದು ಅನುಮಾನ ಹುಟ್ಟಿಸಿದೆ.

ಶೀಘ್ರವೆ ಜಿಲ್ಲಾಡಳಿತ ಮಧ್ಯಪ್ರವೇಸಿಸಿ ಅಬಕಾರಿ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ.