ಉ.ಕ ಸುದ್ದಿಜಾಲ ವಿಜಯಪುರ :

ಕಳೆದ ಎರಡ್ಮೂರು ದಿನಗಳ ಹಿಂದೆ‌‌ವಕ್ಫ್ ವಿರುದ್ಧ ಭಾಷಣ ಮಾಡಿದ ವಿಜಯಪೂರ ಶಾಸಕ ಬಸನಗೌಡ ಯತ್ನಾಳ ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ಯತ್ನಾಳ ವಿರುದ್ಧ ಅಸಮಧಾನ ವಿಚಾರ. ವಿಜಯಪುರದಲ್ಲಿ ನಡೆದ ದೇಗುಲ ಉದ್ಘಾಟನೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಷಣ.

ತೇರದಾಳದಲ್ಲಿ ಕೆಲವರು ಜಿಗಿದ್ಯಾಡಿದ್ರು. ನಾನು ಅಲ್ಲೆ ನಿಂತಿದ್ದರೆ ಅವರನ್ನ ನಮ್ಮವರು ತಿರುವ್ಯಾಡಿ ಬಡಿತಿದ್ರು. ವೇದಿಕೆಯಲ್ಲಿದ್ದ ಪುಜ್ಯರಿಗೆ ಅಪಮಾನವಾಗುತ್ತೆ ಎಂದು ವೇದಿಕೆಯಿಂದ ಇಳಿದು ಬಂದೆ.

ಮೂರು ಸಾವಿರ ಮಠದ ಶ್ರೀಗಳು ಸೇರಿ ದೊಡ್ಡ ದೊಡ್ಡ ಶ್ರೀಗಳಿದ್ದರು. ಅವರ‌ ಮುಂದೆ ಚಿಲ್ಲರೆಗಳಿಗೆ ಉತ್ತರ ಕೊಡೊದು ಬೇಡ ಎಂದು ಸುಮ್ಮನಾದೆ ಎಂದ ಯತ್ನಾಳ್.

ನಾನು ಓಡಿ ಹೋಗೋ ಮಗ ಅಲ್ಲಾ, ಎಂದು ಅಂಜಿಲ್ಲ. ಅಂಜುವ ಮಗ ನಾನಲ್ಲ. ಯಡಿಯೂರಪ್ಪಗೆ ಅಂಜಿಲ್ಲ. ಸಿದ್ದರಾಮಯ್ಯಗೆ ಅಂಜಿಲ್ಲ. ಪ್ರವಾಹ ಬಂದಾಗ ಪ್ರಧಾನಿ ಮೋದಿಯವರಿಗು ಹೇಳಿದ್ದೀನಿ ಎಂದು ಭಾಷಣ ಮಾಡಿದ ಬಸನಗೌಡ ಯತ್ನಾಳ.