ಉ.ಕ ಸುದ್ದಿಜಾಲ ಮೈಸೂರು :
ಒಬ್ಬೊಬ್ಬ ಶಾಸಕನಿಗೆ 50 ಕೋಟಿ ರೂಪಾಯಿ ಆಫರ್. ಈ ಕೋಟಿಗಳ ಲೆಕ್ಕವೇ ರಾಜ್ಯ ರಾಜಕೀಯದಲ್ಲಿ ದಂಗು ಬಡಿಸುತ್ತಿದೆ. ಅಂದ್ಹಾಗೆ ಸಿದ್ದರಾಮಯ್ಯ ಸರ್ಕಾರ ಕೆಡವಲು ಬಿಗ್ ಆಪರೇಷನ್ ನಡೆಯುತ್ತಿದೆ. ಸರ್ಕಾರದ ಪತನದ ಬಗ್ಗೆ ಸ್ವತಃ ಸಿಎಂ ಅಪ್ಡೇಟ್ ಬಾಂಬ್ ಸಿಡಿಸಿದ್ದಾರೆ.
ಐವತ್ತು ಶಾಸಕರಿಗೆ 50 ಕೋಟಿ ಆಫರ್ ನೀಡಿದ್ದಾರೆ!
ಸಿದ್ದರಾಮಯ್ಯ ಸರ್ಕಾರ 5 ವರ್ಷ ಅಧಿಕಾರ ಪೂರ್ಣ ಮಾಡಲ್ವಾ?. ರಾಜ್ಯದಲ್ಲಿ ಆಪರೇಷನ್ ಕಮಲ ಸದ್ದಿಲ್ಲದೇ ನಡೀತಿದ್ಯಾ? ಬಿಜೆಪಿ ಹಿಂಬಾಗಿಲ ರಾಜಕಾರಣಕ್ಕೆ ಪ್ಲಾನ್ ರೂಪಿಸ್ತಿದ್ಯಾ? ಈ ಪ್ರಶ್ನೆಗಳು ಹುಟ್ಟಲು ಕಾರಣ ಮೈಸೂರಲ್ಲಿ ಸಿದ್ದರಾಮಯ್ಯ ಆಡಿದ ಅದೊಂದು ಮಾತು. 50 ಶಾಸಕರ ಜೊತೆ ಸಂಪರ್ಕ ಕ್ರಾಂತಿ ನಡೆದಿದ್ದು, ಒಬ್ಬೊಬ್ಬ ಶಾಸಕನಿಗೆ 50 ಕೋಟಿ ಆಫರ್ ಮಾಡಲಾಗಿದೆಯಂತೆ.
‘ಒಬ್ಬೊಬ್ಬ ಶಾಸಕನಿಗೆ 50 ಕೋಟಿ ಆಫರ್’
ಈ ಸಲ ಹೇಗದರೂ ಮಾಡಿ ಸಿದ್ದರಾಮಯ್ಯ ಸರ್ಕಾರ ಕಿತ್ತು ಹಾಕಬೇಕೆಂದು ಒಬ್ಬೊಬ್ಬ ಎಂಎಲ್ಎಗೆ 50 ಕೋಟಿ ರೂಪಾಯಿ ಆಫರ್ ಮಾಡಿದ್ದಾರೆ. 50 ಜನ ಎಂಎಲ್ಎಗಳಿಗೆ 50 ಕೋಟಿ ರೂಪಾಯಿ ಕೊಡುತ್ತೇವೆ ಎಂದಿದ್ದಾರೆ. ಇದಕ್ಕೆ ನಮ್ಮ ಎಂಎಲ್ಎಗಳು ಯಾರೂ ಕೂಡ ಒಪ್ಪಲಿಲ್ಲ. ಹೆಂಗದರೂ ಮಾಡಿ ಸಿಎಂ ಸಿದ್ದರಾಮಯ್ಯಗೆ ಮಸಿ ಬಳಿದು, ಅಧಿಕಾರದಿಂದ ತೆಗೆದು ಹಾಕಲು ಸಜ್ಜಾಗಿದ್ದಾರೆ.
ಮೊನ್ನೆಯಷ್ಟೇ ಮಿನಿ ಸಮರದ ಕಣದಲ್ಲಿ ಕೇಂದ್ರ ಸಚಿವ ಸೋಮಣ್ಣ, ಸರ್ಕಾರ ಪತನದ ಭವಿಷ್ಯ ನುಡಿದಿದ್ದರು. ಇದಕ್ಕೆ ಹೆಚ್.ಡಿ ದೇವೇಗೌಡ್ರು ಸಹ ಧ್ವನಿಗೂಡಿಸಿದರು. ಈ ಬೆನ್ನಲ್ಲೆ ಸಿಎಂ ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಿದೆ. ಅಂದ್ಹಾಗೆ, ಸೋಮಣ್ಣ ಮತ್ತು ಗೌಡ್ರು ಮೊನ್ನೆ ಹೇಳಿದ್ದೇನು?.
‘ಡಿಸೆಂಬರ್ ವೇಳೆ ಸರ್ಕಾರ ಇರಲ್ಲ’
ಡಿಸೆಂಬರ್ ಒಳಗೆ ನಮ್ಮಪ್ಪನಾಣೆ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಇರಲ್ಲ. ನಾವು ಯಾರೂ ಬೇಕಿಲ್ಲ. ಕಾಂಗ್ರೆಸ್ನವರೇ 23ನೇ ತಾರೀಖು ಸಂಜೆ ಯಾರು ಯಾರು ಯಾವ್ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಕೇಂದ್ರದ ಹೈಕಮಾಂಡ್ ಎಲ್ಲದಕ್ಕೂ ನೀವೇ ಹೊಣೆ ಅಂತಾರೆ.