ಉತ್ತರ ಕರ್ನಾಟಕ ಸುದ್ದಿಜಾಲ ನಿಪ್ಪಾಣಿ :
ಕರ್ನಾಟಕ – ಮಹಾರಾಷ್ಟ್ರ ಗಡಿಯಲ್ಲಿ ಹೈ ಅಲರ್ಟ, ಕರ್ನಾಟಕ ಗಡಿಯಲ್ಲಿರುವ ನಿಪ್ಪಾಣಿ ತಾಲೂಕಿನ ಕೊಗನೊಳಿ ಚಕ್ ಪೊಸ್ಟ್‌ನಲ್ಲಿ ಹೈ ಅಲರ್ಟ. ಮಹಾರಾಷ್ಟ್ರದಿಂದ ಕರ್ನಾಟಕ ಪ್ರವೇಶ ಮಾಡುತ್ತಿರುವ ವಾಹನಗಳನ್ನ ಮರಳಿ ಕಳಿಸುತ್ತಿರುವ ನಿಪ್ಪಾಣಿ ಪೋಲಿಸರು.
ಕರ್ನಾಟಕ ಪ್ರವೇಶ ಪಡೆಯಲು ಕಡ್ಡಾಯವಾಗಿ RTPCR ಬೇಕು. RTPCR ಇಲ್ಲದೇ ಕರ್ನಾಟಕ ಪ್ರವೇಶವಿಲ್ಲ. ಮಹಾರಾಷ್ಟ್ರದಿಂದ ಬರುವ ಪ್ರತಿಯೊಂದು ವಾಹನ ತಪಾಸಣೆ. RTPCR ಇಲ್ಲದೇ ಇರುವವರನ್ನ ಮರಳಿ ಮಹಾರಾಷ್ಟ್ರಕ್ಕೆ ಕಳಿಸುತ್ತಿರುವ ಪೋಲಿಸರು. ಮಹಾರಾಷ್ಟ್ರದಿಂದ ಕರ್ನಾಟಕದ ಮಂಗಳೂರು, ಬೆಂಗಳೂರು, ಮೈಸೂರು ತೆರಲಳುವ ಟ್ರಾವೆಲ್ಸ್ ಮರಳಿ ಕಳಿಸಿದ ನಿಪ್ಪಾಣಿ ಪೋಲಿಸರು.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪ್ರತಿ ವಾಹನ ತಪಾಸಣೆ. ಮಹಾರಾಷ್ಟ್ರ – ಕರ್ನಾಟಕ ಕೊಂಡಿಯಾದ ನಿಪ್ಪಾಣಿ ಚಕ್‌ಪೊಸ್ಟ್‌ನಲ್ಲಿ ಹೈ ಅಲರ್ಟ. ಅದೇ ರೀತಿ ಕಾಗವಾಡ – ಮಿರಜ ಕೊಂಡಿಯಾಗಿರುವ ಕಾಗವಾಡ ಚಕ್ ಪೊಸ್ಟನಲ್ಲಿ ಕೂಡಾ ಹೈ ಅಲರ್ಟ. ಪ್ರತಿಯೊಂದು ವಾಹನ ತಪಾಸಣೆ ಮಾಡುತ್ತಿರುವ ಕಾಗವಾಡ ಪೋಲಿಸರು.