ಉತ್ತರ ಕರ್ನಾಟಕ ಸುದ್ದಿಜಾಲ ಗೋಕಾಕ :

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತ್ತು, ಗೆದ್ದ ಪಕ್ಷೇತರ ಅಭ್ಯರ್ಥಿಗಳು ಸಾಹುಕಾರ್ ಭೇಟಿ ಮಾಡಿದರು. ಬೊರಗಾಂವ ಪ.ಪಂಯ 17 ಸ್ಥಾನಗಳ ಪೈಕಿ 17ಸ್ಥಾನ ಪಕ್ಷೇತರ ಅಭ್ಯರ್ಥಿಗಳ ಪಾಲಾಗಿತ್ತು. ಈ ಹಿನ್ನಲೆ ಗೋಕಾಕ ಸಾಹುಕಾರನ ಬೇಟಿ ಮಾಡಿದ ನೂತನ ಸದಸ್ಯರು.

ಸಚಿವೆ ಶಶಿಕಲಾ ಜೊಲ್ಲೆಗೆ ತವರು ಕ್ಷೇತ್ರವಾದ ನಿಪ್ಪಾಣಿ ತಾಲೂಕಿನ ಬೊರಗಾಂವ ಪ.ಪಂ ಎಲ್ಲ‌‌ ಸದಸ್ಯರು ಪಕ್ಷೇತರರೆ ಗೆಲುವನ್ನ ಸಾಧಿಸಿದ್ದರ ಹಿನ್ನಲೆ ಜೊಲ್ಲೆಗೆ ಮುಖಭಂಗವಾಗಿತ್ತು, ತನ್ನ ಆಪ್ತನ ಮೂಲಕ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದ ರಮೇಶ್ ಜಾರಕಿಹೊಳಿ‌, ಆಪ್ತ ಉತ್ತಮ ಪಾಟೀಲ್ ಸೇರಿ ಗೆದ್ದ ಪಕ್ಷೇತರ ಅಭ್ಯರ್ಥಿಗಳು ರಮೇಶ್ ಜಾರಕಿಹೊಳಿ‌ ಭೇಟಿ ಮಾಡಿದರು. ಬೆಳಗಾವಿ ಜಿಲ್ಲೆಯ ಗೋಕಾಕ್ ನಿವಾಸದಲ್ಲಿ ರಮೇಶ್ ಜಾರಕಿಹೊಳಿ‌ ಬೇಟಿ‌ ನೀಡಿದರು.