ಉತ್ತರ ಕರ್ನಾಟಕ ಸುದ್ದಿಜಾಲ ರಾಯಬಾಗ :

ಕಳೆದ ಮೂರು ದಿನಗಳ ಹಿಂದಷ್ಟೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಕ್ತಾಯಗೊಂಡಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಎಲ್ಲಿಲ್ಲದ ಕಸರತ್ತು ನಡೆಸಿದ್ದಾರೆ. ಪಕ್ಷದ ನಾಯಕರು ಕೂಡಾ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಲ್ಲಿ ನಿರತರಾಗಿದ್ದು, ಇಲ್ಲೊಬ್ಬ ಶಾಸಕರು ತಮ್ಮ ಪಕ್ಷದ ಚುನಾಯಿತ ಅಭ್ಯರ್ಥಿಗಳ ತಂಟೆಗೆ ಬಂದರೆ ಹುಷಾರ್ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.

ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್, ಬಿಜೆಪಿಯಲ್ಲಿ ಬಾರಿ ಕಸರತ್ತು ನಡೆದಿದ್ದು, ಕುಡಚಿ ಶಾಸಕನ ಪಿ.ರಾಜೀವ ಅವರು ಮುಗಳಖೋಡ ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಎದುರು ಚಾಲೆಂಜ್ ಮಾಡಿದ್ದಾರೆ. ಬಿಜೆಪಿಯಿಂದ ಬಿ ಫಾರಂ ಪಡೆದುಕೊಂಡು ಗೆಲುವನ್ನು ಸಾಧಿಸಿರುವ ಅಭ್ಯರ್ಥಿಗಳತ್ತ  ಕೈ ಹಾಕಿದಾ ಅಂದರೆ ಕೈ ಹಾಕಿದೋನ ಮಂಥನಾನೇ. ಒಳಗೆ ಹಾಕಲಿಲ್ಲ ಅಂದರೆ ನಾನ್ ಎಂಎಲ್ಎನೇ ಅಲ್ಲ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.

ಮುಗಳಖೋಡ ಪುರಸಭೆ ಚುನಾವಣೆಯಲ್ಲಿ 13 ಸೀಟುಗಳನ್ನು ಗೆಲ್ಲುವ ಮೂಲಕ ಬಿಜೆಪಿ ಬಹುಮತ ಸಾಧಿಸಿದ್ದು ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಆದರೆ, ಕೇವಲ 4 ಸ್ಥಾನಗಳನ್ನು ಪಡೆದುಕೊಂಡಿರುವ ಕಾಂಗ್ರೆಸ್ ಆರು ಜನ ಪಕ್ಷೇತರರನ್ನು ಸೇರಿಸಿಕೊಂಡು ಬಿಜೆಪಿ ಅಭ್ಯರ್ಥಿಗಳನ್ನು ತನ್ನತ್ತ ಸೆಳೆಯುವ ತಂತ್ರಗಾರಿಕೆ ಶುರುವಾಗಿರುವ ಹಿನ್ನೆಲೆಯಲ್ಲಿ, ಪಿ. ರಾಜೀವ ಓಪನ್ ಚಾಲೆಂಜ್ ಮಾಡಿದ್ದು ನನಗೆ ರಾಜಕಾರಣ ಮಾಡಲಿ ಬೇಕೆನ್ನುವ ಆಸೆ ಏನಿಲ್ಲ, ರಾಯಬಾಗ ತಾಲೂಕಿನಲ್ಲಿ ಶೇಖರಣೆಯಾಗಿರುವ ಕಸವನ್ನು  ಗುಡಿಸೊ ರೀತಿ ಒದ್ದು ಹೊರಗೆ ಹಾಕ್ತೀನಿ ಎಂದು ಗುಡುಗಿದ್ದಾರೆ.

ಶತಾಯ ಗತಾಯ ಪ್ರಯತ್ನದಿಂದ ಮುಗಳಖೋಡ ಪುರಸಭೆಯಲ್ಲಿ ಕುಡಚಿ ಶಾಸಕ ಪಿ.ರಾಜೀವ ಅವರ ನೇತೃತ್ವದಲ್ಲಿ 13 ಸೀಟಗಳನ್ನ ಪಡೆದುಕೊಂಡಿದೆ. ಆದರೆ, ಕಾಂಗ್ರೆಸ್ ಹಾಗೂ ಪಕ್ಷೇತರರು ಕೂಡಿ ಕೆಲ ಬಿಜೆಪಿ ಅಭ್ಯರ್ಥಿಗಳನ್ನು ಹೈಜೆಕ‌ ಮಾಡಲು ಮುಂದಾಗಿದ್ದು, ಇದರಿಂದ ಪಿ.ರಾಜೀವ ಸಭೆ ಮಾಡಿ ಯಾರೂ ಕೂಡಾ ಹೆದರುವ ಅವಶ್ಯಕತೆ ಇಲ್ಲ. ಯಾವುದಕ್ಕೂ ತೆಲೆ ಕೂಡದೆ ಬಿಜೆಪಿ‌ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗುತ್ತಾರೆ ಎಂದು ನೂತನ ಪುರಸಭೆ ಸದಸ್ಯರಲ್ಲಿ ಧೈರ್ಯ ತುಂಬಿದ ಕುಡಚಿ ಶಾಸಕ ಪಿ.ರಾಜೀವ