ಉತ್ತರ ಕರ್ನಾಟಕ ಸುದ್ದಿಜಾಲ ಬಾಗಲಕೋಟೆ :

ಕೌಟುಂಬಿಕ ಕಲಹ ರಾಡ್‌ನಿಂದ ಹೊಡೆದು ಪತ್ನಿ ಕೊಲೆ. ಕುಡಿದು ಬಂದು ಪತ್ನಿ ಜೊತೆ ಜಗಳ ತೆಗೆದಿದ್ದ ಪತಿ ಮುಗಿಲು‌ ಮುಟ್ಟಿದ ಕುಟುಂಬಸ್ಥರ ಆಕ್ರಂದನ. ಬಾಗಲಕೋಟೆ ಜಿಲ್ಲೆ ಇಳಕಲ್ ನಗರದ ಕವಿಶೆಟ್ಟಿ ಓಣಿಯಲ್ಲಿ ಘಟನೆ ನಡೆದಿದೆ.

ಮದೀನಾ ಬಂಡಿ (27) ಕೊಲೆಯಾದ ಗೃಹಿಣಿ, ಮೆಹಬೂಬ್ ಬಂಡಿ ಕೊಲೆಗೈದ ಪಾಪಿ ಪತಿ. ಕುಡಿದು ಬಂದು ಪತ್ನಿ ಜೊತೆ ಜಗಳ ತೆಗೆದಿದ್ದ ಪತಿ ಮೆಹಬೂಬ್. ಜಗಳದಲ್ಲಿ ತಲೆಗೆ ರಾಡ್ ನಿಂದ ಹಲ್ಲೆ ಸ್ಥಳದಲ್ಲೇ ಪತ್ನಿ ಸಾವು. ರವಿವಾರ ರಾತ್ರಿ 1 ಗಂಟೆಗೆ ಈ ಘಟನೆ‌‌ ನಡೆದಿದೆ.

ಮೆಹಬೂಬ್ ಬಂಡಿ ಕೊಲೆಗೈದ ಪಾಪಿ ಪತಿ

ಮನೆಯಲ್ಲಿ ಮಕ್ಕಳ ಎದುರಿಗೆ ಪತ್ನಿ ಹೊಡೆದು ಕೊಲೆ. ಕೊಲೆಗೈದು ಮಕ್ಕಳನ್ನು ಹೊರಬಿಡದೆ ಬೆದರಿಸಿ‌ ಮನೆಯಲ್ಲೇ ಕೂಡಿ ಹಾಕಿದ್ದ ತಂದೆ. ರಕ್ತದಲ್ಲಿ ಬಿದ್ದ ತಾಯಿ ಶವದ ಮುಂದೆ ರಾತ್ರಿ ಮೂರು ಗಂಟೆವರೆಗೂ ಕೂತಿದ್ದ ಮಕ್ಕಳು.‌ ತಂದೆ ನಿದ್ದೆಗೆ ಜಾರಿದಾಗ ಹೊರಬಂದು ಪಕ್ಕದ ಮನೆಯವರಿಗೆ ತಿಳಿಸಿದ ಮಕ್ಕಳು. ಸ್ಥಳಕ್ಕೆ ಇಳಕಲ್ ನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ‌ ಮೃತಳಿಗೆ 9 ಹಾಗೂ 5 ವರ್ಷದ ಇಬ್ಬರು ಮಕ್ಕಳು. ತಾಯಿ ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಮಕ್ಕಳು. ಕೊಲೆಗೈದ ಮೆಹಬೂಬ್ ಎಸ್ಕೇಪ್ ಆಗಿದ್ದಾನೆ.