ಉ.ಕ ಸುದ್ದಿಜಾಲ ತುಮಕೂರು :
2013 ರ ಕಹಿ ನೆನಪು ಮೆಲುಕು ಹಾಕಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್. ತೋವಿನ ಕೆರೆಯಲ್ಲಿ ನಡೆದ ನಮ್ಮೂರ ಹಬ್ಬ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಆಗೋ ಅವಕಾಶ ಕೈ ತಪ್ಪಿದಕ್ಕೆ ನೋವು ಹೊರ ಹಾಕಿದ ಪರಮೇಶ್ವರ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆಯಲ್ಲಿ ನಡೆದ ಕಾರ್ಯಕ್ರಮ.ಕ್ಷೇತ್ರದ ಅಭಿವೃದ್ಧಿ ವಿಚಾರ ಮಾತನಾಡುತ್ತಾ ಮನದಾಳದ ಮಾತು ಬಿಚ್ಚಿಟ್ಟರು. ಈ ಕ್ಷೇತ್ರದ ಜನತೆ ನನ್ನನ್ನ ಎರಡು ಭಾರೀ ಆಯ್ಕೆ ಮಾಡಿದ್ದಾರೆ. ಒಳ್ಳೆ ಟೈಂ ನಲ್ಲಿ ಪಲ್ಟಿ ಒಡೆಸಿದ್ದಾರೆ.
2013 ರಲ್ಲಿ ಒಂದೇ ಒಂದು ಓಟ್ ನಲ್ಲಿ ಗೆದ್ದಿದ್ರೆ ಈ ರಾಜ್ಯದ ಮುಖ್ಯಮಂತ್ರಿ ಆಗೋ ಅವಕಾಶ ಇತ್ತು. ನನ್ನದು ಹಣೆಬರಹ ಇರಬೇಕಲ್ಲಾ ಬರೇ ನಿಮ್ಮದೇ ಹೇಳಿದ್ರೆ ನಾನು ಏನು. ಹಣೆ ಬರಹ ಬಹುಷಾ ನನಗಿರಲಿಲ್ಲ ಅಂತಾ ಕಾಣಿಸುತ್ತೆ.
ಆಗಾಗಿ ಇವತ್ತು ನನ್ನ ಕೈಲಾದ ಕೆಲಸ ಮಾಡಿದ್ದೇನೆ ಅನ್ನೋ ಅತ್ಮತೃಪ್ತಿ ನನಗಿದೆ. ತಮಗೆ ಇದೆಯೋ ಇಲ್ವೋ ಗೊತ್ತಿಲ್ಲ. ತೋವಿನಕೆರೆ ಖಾಸಗಿ ಕಾರ್ಯಕ್ರಮದಲ್ಲಿ ಡಿ.ಪರಮೇಶ್ವರ ಹೇಳಿದರು.