ಉ.ಕ ಸುದ್ದಿಜಾಲ ಮಂಡ್ಯ :

ತೀವ್ರ ಸಂಕಷ್ಟದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು.ಏಕಾಏಕಿ ತಮಿಳುನಾಡಿಗೆ ನೀರು ಬಿಟ್ಟ ರಾಜ್ಯ ಸರ್ಕಾರ. ರಾಜ್ಯದ ಜನರ ಹಿತ ಕಾಪಾಡುವ ಬದಲು ತಮಿಳುನಾಡು ಹಿತಕ್ಕೆ ಮುಂದಾಯ್ತ ರಾಜ್ಯ ಸರ್ಕಾರ?.

KRS ಡ್ಯಾಂನಿಂದ 4 ಸಾವಿರ ಕ್ಯೂಸೆಕ್ ಗೂ ಅಧಿಕ ನೀರು ಬಿಡುಗಡೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ. ಬೆಂಗಳೂರಿಗೆ ಜಲಕ್ಷಾಮ ಎದಾರಾಗಿದ್ರೂ ತಮಿಳುನಾಡು ನೀರು. ನಮ್ಗೆ ನೀರಿಲ್ಲದಿದ್ರೂ ಪಕ್ಕದ ರಾಜ್ಯಕ್ಕೆ ನೀರು ಕೊಟ್ಟ ಕಾಂಗ್ರೆಸ್ ಸರ್ಕಾರ.

ಶನಿವಾರ ಸಂಜೆಯಿಂದ ಏಕಾಏಕಿ ನೀರು ಹರಿಸುತ್ತಿರುವ ಅಧಿಕಾರಿಗಳು. ಕೆಆರ್‌ಎಅಸ್ ಮೂಲಕ ಕಾವೇರಿ ನದಿಗೆ ನೀರು ಬಿಡುಗಡೆ. ಸದ್ಯ ನೀರಿಲ್ಲದೆ ಒಣಗುತ್ತಿರುವ ಮಂಡ್ಯ ರೈತರ ಬೆಳೆಗಳು.

ಬೆಂಗಳೂರು ನೀರಿದಂತೆ ಕಾವೇರಿ ಅವಲಂಬಿಸಿರುವ ಜಿಲ್ಲೆಗಳಲ್ಲಿ ಜೀವ ಜಲಕ್ಕೆ ಹಾಹಾಕಾರ. ತೀವ್ರ ಸಂಕಷ್ಟದ ನಡುವೆಯೂ ತಮಿಳುನಾಡಿಗೆ ನೀರು ಹರಿಯುತ್ತಿರುವ ಸರ್ಕಾರ. ಸರ್ಕಾರದ ಈ ನಿರ್ಧಾರ ವಿರುದ್ಧ ರೈತರ  ಆಕ್ರೋಶ.

ಸದ್ಯ ಅಣೆಕಟ್ಟೆಯಲ್ಲಿ ಕೇವಲ 89 ಅಡಿ ಮಾತ್ರ ನೀರು ಲಭ್ಯ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕಥೆ ಕೆಆರ್‌‌ಎಸ್ ಡ್ಯಾಂ.

ತಮಿಳುನಾಡಿಗೆ ನೀರು ಬಿಟ್ರೆ ಎರಡ್ಮೂರು ದಿನದಲ್ಲೇ 70 ಅಡಿಗೆ ಕುಸಿಯಲಿರುವ ನೀರಿನ ಮಟ್ಟ. 70 ಅಡಿಗೆ ನೀರು ಕುಸಿದ್ರೆ ಮತ್ತಷ್ಟು ಉಲ್ಬಣಿಸಲಿರುವ ಜಲಕ್ಷಾಮ.