ಉ.ಕ ಸುದ್ದಿಜಾಲ ಬೆಳಗಾವಿ :
ಸತತ ಎರಡನೇ ಬಾರಿ ಕೆಎಂಎಫ್ ತಮ್ಮ ಹಿಡಿತಕ್ಕೆ ತೆಗೆದುಕೊಂಡ ಬಾಲಚಂದ್ರ ಜಾರಕಿಹೋಳಿ ಬೆಳಗಾವಿ ಕೆಎಂಎಫ್ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೋಳಿ ಸೇರಿ 10 ನಿರ್ದೇಶಕರ ಅವಿರೋಧ ಆಯ್ಕೆ.
15 ಸ್ಥಾನಗಳ ಪೈಕಿ ಒಟ್ಟು 10ಜನ ನಿರ್ದೇಶಕರ ಅವಿರೋಧ ಆಯ್ಕೆ. ಗೆದ್ದವರೆಲ್ಲಾ ಬಾಲಚಂದ್ರ ಜಾರಕಿಹೋಳಿ ಅವರ ಬೆಂಬಲಿತ ನಿರ್ದೇಶಕರು ಗೋಕಾಕ್ ತಾಲೂಕಿನಿಂದ ಬಾಲಚಂದ್ರ ಜಾರಕಿಹೋಳಿ ಆಯ್ಕೆ.
ಸವದತ್ತಿ ತಾಲೂಕಿನಿಂದ ಸದೆಪ್ಪ ವಾರಿ, ಮೂಡಲಗಿ ತಾಲೂಕಿನಿಂದ ಮಲ್ಲನಗೌಡ ಪಾಟೀಲ್ ಯರಗಟ್ಟಿ ತಾಲೂಕಿನಿಂದ ಶಂಕರ್ ಇಟನಾಳ,ಕಿತ್ತೂರ ತಾಲೂಕಿನಿಂದ ಡಾಕ್ಟರ್ ಪರವನ್ನವರ.
ರಾಯಭಾಗ ತಾಲೂಕಿನಿಂದ ವಿವೇಕರಾವ್ ಪಾಟೀಲ್, ಚಿಕ್ಕೋಡಿ ತಾಲೂಕಿನಿಂದ ವಿರೂಪಾಕ್ಷ ಈಟಿ
ಕಾಗವಾಡ ತಾಲೂಕಿನಿಂದ ಬಾಬುರಾವ್ ವಾಘಮೋರೆ, ನಿಪ್ಪಾಣಿ ತಾಲೂಕಿನಿಂದ ಸಂಜಯ್ ಶಿಂತ್ರೆ, ಬೆಳಗಾವಿ ತಾಲೂಕಿನಿಂದ ಕಲ್ಲಪ್ಪ ಗಿರೆನ್ನವರ ಅಯ್ಕೆ.
ಸತತ ಎರಡನೇ ಬಾರಿ ಕೆಎಂಎಫ್ ನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ಬಾಲಚಂದ್ರ ಜಾರಕಿಹೋಳಿ. ಬಾಲಚಂದ್ರ ಜಾರಕಿಹೋಳಿ ತಂತ್ರಗಾರಿಕೆಗೆ ಥಂಡಾ ಹೊಡೆದ ಘಟಾನುಘಟಿ ನಾಯಕರು.