ಉ.ಕ ಸುದ್ದಿಜಾಲ ಹುಕ್ಕೇರಿ :

ನಿಪ್ಪಾಣಿ ರಾಮ ಮಂದಿರ ಸ್ಪೋಟಿಸುವ ಪತ್ರ ವಿಚಾರ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ ಮಾತುಗಳು

ನಿಪ್ಪಾಣಿಯ ರಾಮ ಮಂದಿರ ಸ್ಪೋಟಿಸುವ ಬೆದರಿಕೆ ಪತ್ರ ಬಂದಿದೆ. ಈ ರೀತಿಯ ಬೆದರಿಕೆ ಹಿಂದೂ ಸಮಾಜ ಸಹನೆ ಮಾಡಲ್ಲ‌, ಹೆದರುವುದು ಇಲ್ಲ. ಘಜನಿ, ಘೋರಿ, ಬಾಬರ ಇಲ್ಲ ಈಗ ಇರುವುದು ಭಾರತೀಯ ಮುಸ್ಲಿಂರು.

ಕಿಡಗೇಡಿಗಳು ಈ ರೀತಿಯ ಬೆದರಿಕೆಯನ್ನ ಖಂಡಿಸ್ತಾ ಇದ್ದೇವೆ, ಸವಾಲ ಹಾಕ್ತಾ ಇದ್ದೇವೆ  ನಿಪ್ಪಾಣಿಯ ರಾಮ ಮಂದಿರದ ಒಂದೇ ಒಂದು ಕಲ್ಲು ಸಹ  ನಿಮ್ಮ ಕಡೆಯಿಂದ ಅಲ್ಲಾಡಸಕ್ಕಾಗಲ್ಲ.

ನಿಮಗೆ ತಾಕ್ಕತ್ತಿದ್ದರೆ ಮುಟ್ಟಿ ನೋಡೊನ  ಹಿಂದೂ ಸಮಾಜ ತಿರುಗೇಟು ನೀಡುತ್ತೆ ಎಂದು ಎಚ್ಚರಿಕೆ‌ ಕೊಡ್ತಾ ಇದ್ದೇನೆ . ಸರ್ಕಾರ ಎಲ್ಲ ರಾಮ ಮಂದಿರಗಳಿಗೆ ಭದ್ರತೆ ಒದಗಿಸಬೇಕು  ಶ್ರೀ ರಾಮ‌ ಸೇನೆ ಕಾರ್ಯಕರ್ತರು ಸಂರಕ್ಷಣೆಗೆ ಸಿದ್ದರಾಗಬೇಕು ಎಂದು ಗುಡುಗಿದ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ.