ಉ.ಕ ಸುದ್ದಿಜಾಲ ಅಥಣಿ :
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಯಂಕಂಚಿ ಗ್ರಾಮದ ಪ್ರೌಢಶಾಲೆಯ ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಶಾಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಗೌಡಪ್ಪ ಖೋತ ಮಾಹಿತಿ ನೀಡಿದರು.
ಅಥಣಿ ತಾಲೂಕಿನಲ್ಲಿ ಸದ್ಯ ಹತ್ತನೇ ತರಗತಿ ವಿದ್ಯಾರ್ಥಿಗಳ ಶಾಲೆ ಪ್ರಾರಂಭವಾಗಿದೆ. ಇದರಲ್ಲಿ ಕಳೆದ ಜ.12 ರಂದು ತಾಲೂಕಿನ ಯಂಕಂಚಿ ಗ್ರಾಮದ ಪ್ರೌಢಶಾಲೆಯ 95 ವಿದ್ಯಾರ್ಥಿಗಳ ಪೈಕಿ 50 ವಿದ್ಯಾರ್ಥಿಗ ಸ್ವಾಬ್ ಟೆಸ್ಟ್ ಮಾಡಲಾಗಿತ್ತು, ಇದರಲ್ಲಿ 10 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಇನ್ನು 35 ವಿದ್ಯಾರ್ಥಿಗಳ ಕೊರೊನಾ ವರದಿ ಬಾಕಿ ಉಳಿದಿದೆ. ಸೋಂಕು ಪತ್ತೆಯಾದ ವಿದ್ಯಾರ್ಥಿಗಳಲ್ಲಿ ಅಷ್ಟೋಂದು ರೋಗ ಲಕ್ಷಣಗಳು ಹೆಚ್ಚಾಗಿಲ್ಲ, ಅವರೆಲ್ಲರೂ ಹೋಂ ಐಸೋಲೇಷನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು. ಅಥಣಿ ತಾಲೂಕಿನ ಹಲಿಹಡಲಗಿ ಗ್ರಾಮದ ಓರ್ವ ಶಿಕ್ಷಕರಿಗೆ ಸೋಂಕು ಪತ್ತೆಯಾಗಿದ್ದು ಅವರು ಕೂಡ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಕೊರೊನಾ ವ್ಯಾಕ್ಸೀನ್ ಅಭಿಯಾನ ತಾಲೂಕಿನಲ್ಲಿ ಪ್ರಾರಂಭ ಆಗಿದೆ ಮೊದಲೇ ಡೋಸ್ ಎಲ್ಲರಿಗೂ ಮುಗಿದಿದೆ ಎಂದು ಹೇಳಿದರು.