ಉ.ಕ ಸುದ್ದಿಜಾಲ ಬೆಳಗಾವಿ :
ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸಾಮೂಹಿಕ ಸೀಮಂತ ಕಾರ್ಯಕ್ರಮ ಆಯೋಜನೆ. ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಬೆಳಗ್ಗೆ 10.30 ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. 3000 ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಬೆಳಗಾವಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಹಿರಿಯ ನಾಗರಿಕರರ ದಿನಾಚರಣೆ ಹಿನ್ನೆಲೆಯಲ್ಲಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ವಿಶ್ವ ಅಂಗವಿಕಲ ದಿನದ ಅಂವವಾಗಿ 100 ಜನರಿಗೆ ಉಚಿತ ದ್ವಿಚಕ್ರ ವಾಹನ ವಿತರಣೆ ಮಾಡ್ತಿವಿ. ರಾಜ್ಯದಲ್ಲಿ ಮೊದಲ ಬಾರಿಗೆ ನಮ್ಮ ಇಲಾಖೆಯಿಂದ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿದೆ.
ಮೂರು ತಿಂಗಳ ಗರ್ಭಿಣಿ ಹಿಡಿದು ಹಿರಿಯರಿಗೂ ನಮ್ಮ ಇಲಾಖೆ ಸೇವೆ ನೀಡ್ತಿದೆ. ಹುಟ್ಟುವ ಮಗು, ತಾಯಿ ಆರೋಗ್ಯವಾಗಿರಲಿ ಎಂದು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಸ್ತ್ರೀಶಕ್ತಿ 5 ಜಿಲ್ಲೆಯ ವಸ್ತು ಪ್ರದರ್ಶನ ಮಳಿಗೆ ಉದ್ಘಾಟನೆ ಇರಲಿದೆ.
ಚನ್ನಮ್ಮ ಪ್ರಶಸ್ತಿಗೆ ಭಾಜನರಾದವರಿಗೆ ಸತ್ಕಾರ ಮಾಡಲಾಗುವುದು. ಜಿಲ್ಲೆಯ ಎಲ್ಲ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಲಿದ್ದಾರೆ. ಹೊಸತನ ವಿಚಾರ ಮಾಡುವ ನನಗೆ ಮಾಧ್ಯಮಗಳ ಸಹಕಾರ ಇರಲಿ. ತವರು ಮನೆಗೆ ಮಗಳನ್ನು ಕರೆದು ಕಾರ್ಯಕ್ರಮ ಮಾಡುವಂತೆ ಇಲ್ಲಿ ಕಾರ್ಯಕ್ರಮ ಮಾಡ್ತಿವಿ.
ಸೀರೆ ನೀಡಿ, ಉಡಿ ತುಂಬಿ ಸೀಮಂತ ಕಾರ್ಯಕ್ರಮ ಮಾಡ್ತಿವಿ. ಕಿಟ್, ರೇಷನ್ ಕೂಡ ಗರ್ಭಿಣಿಯರಿಗೆ ಮನೆ ಮನೆಗೆ ತಲುಪಿಸುತ್ತಿದ್ದೇವೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ 3 ಸಾವಿರ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಇರಲಿದೆ. ಅನಾನುಕೂಲ ಆಗದಂತೆ ಜರ್ಮನ್ ಟೆಂಟ್ ಹಾಕಿದ್ದೇವೆ, ನೀರಿನ ವ್ಯವಸ್ಥೆ ಮಾಡಿದ್ದೇವೆ.
ಫುಡ್ ಕಿಟ್ ಜೊತೆಗೆ ಹೋಳಿಗೆ ಊಟ ಮಾಡಿಸ್ತಿದ್ದೇವೆ. ಪ್ರಾಯೋಗಿಕ ಕಾರ್ಯಕ್ರಮ ಇದು, ಮಾರ್ಚ್ 26 ಕ್ಕೆ ಬಳ್ಳಾರಿಯಲ್ಲಿ ಮಾಡ್ತಿವಿ. ಬರುವ ದಿನಗಳಲ್ಲಿ ರಾಜ್ಯಮಟ್ಟದಲ್ಲೂ ಈ ಕಾರ್ಯಕ್ರಮ ಮಾಡ್ತಿವಿ ಎಂದರು.
ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸಾಮೂಹಿಕ ಸೀಮಂತ ಕಾರ್ಯಕ್ರಮ ಆಯೋಜನೆ – ಹೇಗಿರಲಿದೆ ಗೊತ್ತಾ?
