ಉ.ಕ ಸುದ್ದಿಜಾಲ ಹಾವೇರಿ :

ಫಲಾನುಭವಿಗಳಿಗೆ ಹಣದ ಬದಲು 10 ಕೆ.ಜಿ ಅಕ್ಕಿ ವಿತರಿಸುತ್ತಿರುವ ಹಿನ್ನಲೆ ಮತ್ತೆ ಮತ್ತಷ್ಟು ಆ್ಯಕ್ಟೀವ್ ಆದ ಕಾಳಸಂತೆಕೋರರು. ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ.

ಎಗ್ಗಿಲ್ಲದೆ ರಾಜಾರೋಷವಾಗಿ ಅಕ್ಕಿ ಸಂಗ್ರಹ ಮಾಡುತ್ತಿರೋ ದಂದೆಕೋರರು ಜಿಲ್ಲೆಯ ಬಹುತೇಕ ಕಡೆ ನ್ಯಾಯಬೆಲೆ ಅಂಗಡಿಗಳ ಪಕ್ಕದಲ್ಲೇ ಕಾಳಸಂತೆ ಅಂಗಡಿಗಳು ಓಪನ್ ವರದಿ ಮಾಡಲು ಹೋದ ಮಾದ್ಯಮಗಳಿಗೆ ಅಕ್ಕಿ ದಂಧೆ ಕಿಂಗ್ ಪಿನ್ ಅವಾಜ್ ಹಾಕಿದ ಸಚಿನ್ ಕಬ್ಬೂರು

ಮಾದ್ಯಮದವರಿಗೆ ಧಮ್ಕಿ ಹಾಕಿ ಹಲ್ಲೆ ಮಾಡಲು ಮುಂದಾದ ಸಚಿನ್ ಕಬ್ಬೂರ್ ವರದಿ ಮಾಡುವ ಸಂದರ್ಭದಲ್ಲಿ ಮಾದ್ಯಮಗಳ ಕ್ಯಾಮರಾ ಧ್ವಂಸ ಮಾಡಿದ ಅಕ್ಕಿದಂಧೆಕೋರ.

ಹಾವೇರಿ ನಗರದಲ್ಲೇ ರಾಜಾರೋಶವಾಗಿ ಅಕ್ಕಿ ದಂಧೆ ಹಾವೇರಿ ನಗರದ ಅಕ್ಕಿಪೇಟೆಯ ಬಸವರಾಜ ಹಂದ್ರಾಳ ಎಂಬುವವರ ಮನೆಯಲ್ಲಿ ಅನ್ನಭಾಗ್ಯ ಅಕ್ಕಿ ಸಂಗ್ರಹ ಈ ಬಗ್ಗೆ ವರದಿ ಮಾಡಲು ಹೋಗಿದ್ದ ಮಾದ್ಯಮದವರ ಮೇಲೆ ಹಲ್ಲೆ ಯತ್ನ.

ಐಶಾರಾಮಿ ಆಡಿ ಕಾರ್ ನಲ್ಲಿ ಬಂದಿದ್ದ ಸಚಿನ್ ಕಬ್ಬೂರ್ ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ : ಪ್ರಶ್ನಿಸಿದ್ದಕ್ಕೆ ಮಾಧ್ಯಮದವರ ಮೇಲೆ ಹಲ್ಲೆ