ಉ.ಕ‌ ಸುದ್ದಿಜಾಲ ಅಥಣಿ :

ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ ಸವದಿ ಹೆಸರು ಪ್ರಸ್ತಾಪ ಹಿನ್ನೆಲೆ. ನ್ಯೂಸ್ ಫಸ್ಟ‌ಗೆ ಪ್ರತಿಕ್ರಿಯೆ ನೀಡಿದ ಶಾಸಕ ಲಕ್ಷ್ಮಣ ಸವದಿ ಅದೆಲ್ಲವೂ ಉಹಾಪೋಹ ಅಷ್ಟೇ. ಈ ಕುರಿತಂತೆ ಪಕ್ಷದ ವರಿಷ್ಠರು, ಸಿಎಂ, ಡಿಸಿಎಂ ನನ್ನ ಜತೆ ಚರ್ಚೆ ಮಾಡಿಲ್ಲ. ಇದೆಲ್ಲವೂ ಮಾಧ್ಯಮಗಳಲ್ಲಿ ಮಾತ್ರ ಚರ್ಚೆ ಆಗ್ತಿದೆ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯ ಅಥಣಿ ಪ್ರವಾಸಿ ಮಂದಿರದಲ್ಲಿ ನ್ಯೂಸ್ ಫಸ್ಟ ಜೊತೆಗೆ ಮಾತನಾಡಿದ ಅವರು, ನಾನು ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿ ಮಾಡಿದ್ದು ಕೇವಲ ಕ್ಷೇತ್ರದ ಅಭಿವೃದ್ಧಿಗೊಸ್ಕರ ಅಷ್ಟೇ. ಅಲ್ಲಿ ಯಾವುದೇ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಿಲ್ಲ. ಪದಾಧಿಕಾರಿಗಳ ಪುರ್ನರಚನೆ ಮಾಡೋದು ಕೇಂದ್ರದ ಹಾಗೂ ರಾಜ್ಯಾಧ್ಯಕ್ಷರು ಮಾಡ್ತಾರೆ.

ಡಿಕೆಶಿ ಹಾಗೂ ಸತೀಶ ಜಾರಕಿಹೊಳಿ ಮುಸಕಿನ‌ ಗುದ್ದಾಟ ವಿಚಾರವಾಗಿ ಪ್ರತಿಕ್ರಿಯಿಸೊದ ಅವರು, ಡಿ ಕೆ ಶಿವಕುಮಾರ ಹುಕ್ಕೇರಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ರು. ಬೆಳಗಾವಿಯ ಯಾವುದೇ ಶಾಸಕರಿಗಾಗಲೀ, ಸಚಿವರಿಗಾಗಲೀ ಡಿಕೆಶಿ ಬರ್ತಿದ್ದಾರೆ ಅನ್ನೊದು ಗೊತ್ತಿರಲಿಲ್ಲ ಅವರ ಪ್ರವಾಸದ ವಿವರದ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ.

ಅವತ್ತು ನಾನು ಸಹ ಬೇರೆ ಯಾವುದೋ ಕೆಲಸದ ಮೇಲೆ ಬೆಂಗಳೂರಿನಲ್ಲಿದ್ದೆ. ನಾನು ಸಹ ಹೋಗಿರಲಿಲ್ಲ ಹೀಗಾಗಿ ಅಪಾರ್ಥ ತಿಳಿದುಕೊಳ್ಳುವುದು ಬೇಡ. ಹುಕ್ಕೇರಿಗೆ ನವರಾತ್ರಿ ಸಂಬಂಧಪಟ್ಟಂತ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಂದಿದ್ರು.  ಅದು ಯಾವುದೇ ಸರ್ಕಾರಿ ಕಾರ್ಯಕ್ರಮ ಆಗಿರಲಿಲ್ಲ.

ಲೋಕಸಭೆ ಚುನಾವಣೆ ಮುಗಿಯೋದ್ರೊಳಗೆ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸೊದ ಅವರು, ಈಶ್ವರಪ್ಪನವರು ಹಂಗೇ. ಮೊದಲಿನಿಂದಲೂ ಅವರು ಅದನ್ನೆ ಹೇಳುತ್ತಾ ಬಂದವರು.

ಯಾವಾಗ್ಲೂ ಇಂತಹ ಹೇಳಿಕೆ ಕೊಟ್ಟು ಜನರ ಗಮನ ಬೇರೆಡೆ ಸೆಳೆಯುತ್ತಾರೆ. ಈ ರಾಜ್ಯದ ಜನತೆ ಕಾಂಗ್ರೆಸ್‌ಗೆ ಸುಭದ್ರ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದೆ. ಯಾರೇ ಬಂದ್ರೂ, ಏನೇ ಪ್ರಸಂಗವಾದ್ರೂ ಮುಂದಿನ ಐದು ವರ್ಷಗಳ ಕಾಲ ಸರ್ಕಾರ ಸುಭದ್ರವಾಗಿರಲಿದೆ.

ಮುಂದಿನ ಸಲವೂ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೇರಲಿದೆ. ಬಿಜೆಪಿ ಸತತ ಹತ್ತು ವರ್ಷಗಳ ಕಾಲ ವಿರೋಧ ಪಕ್ಷದಲ್ಲಿರಬೇಕು ಎನ್ನೋದು ನಮ್ಮ ಅಪೇಕ್ಷೆ ಎಂದ ಲಕ್ಷ್ಮಣ ಸವದಿ.