ಉತ್ತರ ಕರ್ನಾಟಕ ಸುದ್ದಿಜಾಲ ಬೆಳಗಾವಿ :

ಅಕ್ಕನ ಮಗಳ ಮದುವೆ ಸಲುವಾಗಿ ಯೋಧ ರಜೆ ತೆಗೆದುಕೊಂಡು ಬಂದಿದ್ದು, ಅನುಮಾನಸ್ಪದವಾಗಿ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೀರೂರ್ ಗ್ರಾಮದಲ್ಲಿ ನಡೆದಿದೆ.

ಹೀರೂರ್ ಗ್ರಾಮದ ಯೋಧ ಈರಪ್ಪ ಪೂಜಾರಿ ಅನುಮಾನಾಸ್ಪದ ಸಾವನಪ್ಪಿದ್ದು, ಡಿ.2 ರಂದು ಅಕ್ಕನ ಮಗಳ ಮದುವೆಗೆಂದು ರಜೆಗೆ ಬಂದಿದ್ದ ಯೋಧ. ಡಿ.25 ರಂದು ಮದುವೆ ಕಾರ್ಡ್ ಕೊಡಲು ಸಂಜೆ ಹೊರ ಹೋಗಿದ್ದ ಯೋಧ ಮರಳಿ ಬಂದಿಲ್ಲ.

ರಾತ್ರಿ ಗ್ರಾಮದ ಹೊರ ವಲಯದಲ್ಲಿ ತಲೆಗೆ ಬಲವಾಗಿ ಹೊಡೆದು ಕೊಲೆ ಶಂಕೆ ವ್ಯಕ್ತವಾಗಿದ್ದು, ಕೊಲೆ ಮಾಡಿ ನಂತರ ಪಾಳುಬಿದ್ದ ಬಾವಿಗೆ ಎಸೆದು ಮೃತದೇಹ ಎಸೆದಿರುವ ಶಂಕೆ. ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ ಕುಟುಂಬಸ್ಥರಿಗೆ ಶವ ಹಸ್ತಾಂತರ‌. ಕೊಲೆ ಆರೋಪಿಗಳನ್ನ ಶೀಘ್ರದಲ್ಲಿ ಬಂಧಿಸಿ ನ್ಯಾಯ ಕೊಡುವಂತೆ ಕುಟುಂಬಸ್ಥರ ಮನವಿ ಮಾಡಿದ್ದಾರೆ. ಈ ಕುರಿತು ಮುನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.