ಉತ್ತರ ಕರ್ನಾಟಕ ಸುದ್ದಿಜಾಲ ಹಾವೇರಿ :
ಬಸ್‌ನಿಂದ ಬಿದ್ದು ವಿದ್ಯಾರ್ಥಿ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಗಂಗೆಬಾವಿ ಕ್ರಾಸ್ ಬಳಿ ನಡೆದಿದೆ.
ಶಿಗ್ಗಾವಿ ತಾಲೂಕಿನ ದುಂಡಶಿ ಗ್ರಾಮದ ವಿನಾಯಕ ಪಾಟೀಲ್ ಸಾವನ್ನಪ್ಪಿರುವ ಯುವಕ. ಶಿಗ್ಗಾವಿ ಪಟ್ಟಣದ SRJV ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಅಭ್ಯಾಸ ಮಾಡುತ್ತಿದ್ದ ವಿನಾಯಕ ಕಾಲೇಜು ಮುಗಿಸಿ ಶಿಗ್ಗಾಂವಿ ಬಸ್ ನಿಲ್ದಾಣದಿಂದ ತನ್ನ ಊರಿಗೆ ತೆರಳುವಾಗ ಗಂಗೆಬಾವಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.