ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿ ಕೆರೆಯಲ್ಲಿ ಮುಳಗಿ 17ವರ್ಷದ ಬಾಲಕ ದಾರುಣ ಸಾವು!, ಬೆಳಗಾವಿ ತಾಲೂಕಿನ ಹೊಸವಂಟಮೂರಿ ಗ್ರಾಮದಲ್ಲಿ ಘಟನೆ. ಹೊಸವಂಟಮೂರಿ ಗ್ರಾಮದ ನಾಗರಾಜ್ ವನ್ನೂರಿ (17) ಬಾಲಕ ಸಾವು.

ಕೆರೆಯಲ್ಲಿ ಎತ್ತಿನ ಮೈತೋಳೆಯಲು ಹೋದಾಗ ಆಯತಪ್ಪಿಬಿದ್ದು ಸಾವು. ಮೂವರು ಸ್ನೇಹಿತರ ಜೊತೆಗೆ ಹೋಗಿದ್ದ ಬಾಲಕ ಸಾವು. ತಕ್ಷಣವೇ ಬಾಲಕನನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ. ಜಿಲ್ಲಾಸ್ಪತ್ರೆಗೆ ಕರೆತಂದಾಗ ಬಾಲಕ ಸಾವನ್ನಪ್ಪಿರೋ ಬಗ್ಗೆ ವೈದ್ಯರ ಮಾಹಿತಿ.

ಬಾಲಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಕಣ್ಣೀರು. ಮುಗಿಲು ಮುಟ್ಟಿದ ಕುಟುಂಬಸ್ಥರ ಹಾಗೂ ಗ್ರಾಮಸ್ಥರ ಆಕ್ರಂದನ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.