ಉ.ಕ ಸುದ್ದಿಜಾಲ ಚಿಕ್ಕೋಡಿ
ಸಾಲಭಾದೆ ತಾಳಲಾರದೆ ಯುವಕನೋರ್ವ ನದಿಗೆ ಹಾರಿ ಆತ್ಮಹತ್ಯೆಯನ್ನು ಮಾಡಿಕೊಂಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಯಡೂರಟೇಕ ಗ್ರಾಮದಲ್ಲಿ ನಡೆದಿದೆ.
ಯಡೂರಟೇಕ್ ಗ್ರಾಮದ ನಿವಾಸಿ ಕೃಷ್ಣಾ ದುಂಡಪ್ಪಾ ಪಾಟೀಲ (30) ಆತ್ಮಹತ್ಯೆಯನ್ನು ಮಾಡಿಕೊಂಡ ಯುವಕನಾಗಿದ್ದು, ಕುಟುಂಬ ನಿರ್ವಹಣೆಗಾಗಿ ಸಾಲವನ್ನು ಮಾಡಿಕೊಂಡಿದ್ದ ಸಾಲವನ್ನು ತೀರಿಸಲಾಗದೆ ಮನನೊಂದು ನದಿಗೆ ಹಾರಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆಂದು ಮೃತನ ಸಂಬಂಧಿಕರು ತಿಳಿಸಿದ್ದಾರೆ.
ಹಳೆ ಯಡೂರ ಗ್ರಾಮದ ದಲಿತ ಕಾಲೋನಿಯ ನದಿತೀರದಲ್ಲಿ ಶವಪತ್ತೆಯಾಗಿದೆ. ಅಂಕಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಘಟನೆ ಕುರಿತಂತೆ ಅಂಕಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.