ಉ.ಕ ಸುದ್ದಿಜಾಲ ಅಥಣಿ :
ಅಥಣಿ ಹೊರವಲಯದಲ್ಲಿ ಭೀಕರ ಅಪಘಾತ ಮೂವರು ಸಾವು, ಕಾರ್ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ಮದ್ಯ ಭೀಕರ ಅಪಘಾತ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮುರಗುಂಡಿ ಹೊರವಲಯದಲ್ಲಿ ನಡೆದಿದೆ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದ ಹೊರವಲಯದಲ್ಲಿ ಅಪಘಾತ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮಂಡಳಿಯ ವಿಜಯಪುರ ಬಸ್ ಡಿಪೋಗೆ ಸೇರಿದ ಬಸ್ ಹಾಗೂ ಕಾರ್ ಮದ್ಯ ಮುಖ ಮುಖಿ ಡಿಕ್ಕಿ. ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರ್ ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದೆ.
ಕೊಲ್ಲಾಪೂರದಿಂದ ಅಫಜಲಪೂರ ಕಡೆಗೆ ಹೊರಟಿದ್ದ ಕಾರು, ಅಥಣಿಯಿಂದ ಮಿರಜಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಕಾರ್ ನಲ್ಲಿದ್ದ ನಾಲ್ವರ ಪೈಕಿ ಮೂವರು ಸಾವು. ಕಲಬುರ್ಗಿ ಜಿಲ್ಲೆಯ ಅಫಜಲಪೂರ ಮೂಲದ ರಾಹುಲ, ಗಿರೀಶ, ಸಂಗು ಸ್ಥಳದಲ್ಲಿಯೇ ಸಾವು ರಾಧಿಕಾಗೆ ಗಂಭೀರ ಗಾಯ
ರಾಧಿಕಾ ಗಂಭೀರ ಗಾಯ ಹಾಗೂ ಬಸ್‌ನಲ್ಲಿದ್ದ ಗಾಯಾಳುಗಳನ್ನು ಅಥಣಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ. ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಅಥಣಿ ಹೊರವಲಯದಲ್ಲಿ ಭೀಕರ ಅಪಘಾತ ಮೂವರು ಸಾವು
