ಉ.ಕ ಸುದ್ದಿಜಾಲ ಅಥಣಿ :

ಅಭಿವೃದ್ಧಿ ಆಗಿಲ್ಲಾ ಅಂದ್ರೆ ನಾನು ರಾಜಿನಾಮೆ ನೀಡುತ್ತೇನೆ ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಿಯಿಲ್ಲ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು ನಮ್ಮ ಗೋಕಾಕ ಮತಕ್ಷೇತ್ರದಲ್ಲಿ ಎಲ್ಲ ರಸ್ತೆಗಳು ಸರಿ ಇವೆ. ಕಬ್ಬಿನ ಟ್ರ್ಯಾಕ್ಟರನಿಂದ ಕೆಲ ರಸ್ತೆ ಹಾಳಾಗಿರಬಹುದು ಅದನ್ನ ಹೊರತು ಪಡಿಸಿದರೆ ಉಳಿದ ರಸ್ತೆಗಳೆಲ್ಲವೂ ಸರಿ ಇವೆ ಎಂದು ಶಾಸಕ ಸತೀಶ ಜಾರಕಿಹೊಳಿಗೆ ನೇರವಾಗಿ ಟಾಂಗ ನೀಡಿದ ರಮೇಶ ಜಾರಕಿಹೊಳಿ.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿಚಾರ ನನಗೆ ಗೋತ್ತಿಲ್ಲ, ಲಖನ್ ಜಾರಕಿಹೊಳಿ ಅವರ ಸ್ವತಂತ್ರ ಅಭ್ಯರ್ಥಿ. ಅವರು ಏನೆ ಮಾಡತನಾಡಿದರು ನನಗೆ ಸಂಬಂಧವಿಲ್ಲ ಎಂದರು. ಮಂತ್ರಿ ಸ್ಥಾನ ವರಿಷ್ಠರಿಗೆ ಬಿಟ್ಟಿದ್ದು. ಅಥಣಿ ಭಾಗಕ್ಕೆ ನೀರಾವರಿ ಯೋಜನೆ ಅನುಷ್ಠಾನ ಮಾಡಲಾಗುವುದು. ಸಚಿವ ಉಮೇಶ್ ಕತ್ತಿ ನಿವಾಸದಲ್ಲಿ ಪಕ್ಷ ಸಂಘಟನೆ ಸಲುವಾಗಿ ಸಭೆ ಸೇರಲಾಗಿತ್ತು. ಗೊತ್ತಿಲ್ಲದೆ ಏನು ಮಾತನಾಡಬಾರದು ಎಂದು ಹೇಳಿದರು.