ಉ.ಕ ಸುದ್ದಿಜಾಲ ಕಾಗವಾಡ :
ಗಡಿ ಭಾಗದಲ್ಲಿ ಕೊರೊನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತಲೇ ಇರುವ ಹಿನ್ನಲೆಯಲ್ಲಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರು ತಮ್ಮ 67ನೇ ಹುಟ್ಟುಹಬ್ಬವನ್ನು ಆಚರಣೆ ಮಾಡದಿರಲು ನಿರ್ಧರಿಸಿ ಅದರ ಬದಲಾಗಿ ಸಾರ್ವಜನಿಕರಿಗೆ ಅವರ ಅಭಿಮಾನಿ ಬಳಗದವರಿಗೆ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಉಚಿತ ಮಹಾಆರೋಗ್ಯ ತಪಾಸಣೆ ಮೇಳವನ್ನು ಆಯೋಜನೆ ಮಾಡಲಾಗಿದ್ದು ಮಹಾ ಆರೋಗ್ಯ ಮೇಳ ಹಮ್ಮಿಕೊಂಡಿದ್ದಾರೆ.
ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಹಾಗೂ ಮಿರಜನ ಸೇವಾಸದನ ಲೈಫ್ ಲೈನ್ ಸೂಪರ್ ಸ್ಟೇಶಾಲಿಟಿ ಹಾಸ್ಪಿಟಲ್ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಮಹಾ ಆರೋಗ್ಯ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಯನ್ನು ಸೋಮವಾರ ದಿ. 31-01-2022 ರಂದು ಮುಂಜಾನೆ 9 ರಿಂದ ಸಾಯಂಕಾಲ 5 ರ ವರೆಗೆ ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿರುವ ಅಥಣಿಯ ಶುಗರ್ಸ ಕಾರ್ಖಾನೆ ಆವರಣದಲ್ಲಿ ಉಚಿತ ನೇತ್ರ ತಪಾಸಣೆ, ರಕ್ತದಾನ ಶಿಬಿರ, ಸಾಮಾನ್ಯ ಕಾಯಿಲೆಗಳ ಉಚಿತ ತಪಾಸಣೆಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಹಿಳಾ ತಜ್ಞರಿಂದ ಮಹಿಳೆಯರಿಗೆ ಪ್ರತ್ಯೇಕ ತಪಾಸಣೆ ಕೇಂದ್ರವಿರುತ್ತದೆ. ಶಿಬಿರಕ್ಕೆ ಆಗಮಿಸುವವರು ಕಡ್ಡಾಯವಾಗಿ ಆಧಾರ ಕಾರ್ಡ ತರಬೇಕಾಗಿ ವಿನಂತಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ತಮ್ಮಣ್ಣಾ ಚೌಗಲಾ – 7624992447
ಕೃಷ್ಣಾ ಪಾಟೀಲ – 9886945037
ಸುರೇಶ ಸೂರ್ಯವಂಶಿ – 9729516435