ಉ.ಕ ಸುದ್ದಿಜಾಲ ಅಥಣಿ :

ಮದುವೆಯಾಗುತ್ತೇನೆಂದು ನಂಬಿಸಿ ಕೈಕೊಟ್ಟ ಹಿನ್ನೆಲೆಯಲ್ಲಿ ಅಥಣಿ ಪೊಲೀಸ್‌ ಠಾಣೆ ವ್ಯಾಪ್ತಿಯ ತಾಂವಶಿ ಗ್ರಾಮದ ಯುವತಿಯೋರ್ವಳು ಮನನೊಂದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ತೇಜಸ್ವಿನಿ ಗಂಗಪ್ಪ ಗುಜ್ಜರ (21) ಆತ್ಮಹತ್ಯೆ ಮಾಡಿಕೊಂಡ ಯುವತಿ. ಅಥಣಿ ಪಟ್ಟಣದ ಆಸೀಫ್ ದೇಸಾಯಿ ಪ್ರೀತಿಸಿ ಕೈಕೊಟ್ಟಿದ್ದಾನೆ. ಎಂದು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಆಸೀಫ್‌ ತೇಜಸ್ವಿನಿಯನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಜ.26ರಂದು ಮದುವೆ ಆಗುವುದಿಲ್ಲ ಎಂದು ಆಶೀಫ್ ನಿರಾಕರಿಸಿದಾಗ ಮನನೊಂದ ತೇಜಸ್ವಿನಿ ಕೀಟನಾಶಕ ಸೇವಿಸಿದ್ದಳು.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತಾದರೂ ಜ.27 ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಮೃತಳ ತಾಯಿ ಶೋಭಾ ಗುಜ್ಜರ ಅವರು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.