ಉ.ಕ ಸುದ್ದಿಜಾಲ ಯಾದಗಿರಿ :

ಸಚಿವ ಮಧು ಬಂಗಾರಪ್ಪ ವಿರುದ್ದ ಪ್ರಣವಾನಂದ ಶ್ರೀ ತೀವ್ರ ವಾಗ್ದಾಳಿ. ಸಚಿವ ಮಧು ಬಂಗಾರಪ್ಪ ರಾಜಿನಾಮೆಗೆ ಪ್ರಣಾವನಂದ ಶ್ರೀ ಒತ್ತಾಯ ಸಾಧು, ಸಂತರ ಬಗ್ಗೆ ಮಧು ಬಂಗಾರಪ್ಪ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.

ಯಾದಗಿರಿಯಲ್ಲಿ ಇಡಿಗ ಸಮುದಾಯದ ಪ್ರಣವಾನಂದ‌ ಶ್ರೀಗಳು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು ಮಧು ಬಂಗಾರಪ್ಪಗೆ ವಿನಾಶ ಕಾಲ ವಿಪರೀತ ಬುದ್ಧಿ ಬಂದಿದೆ ಸಿಎಂ ಸಿದ್ದರಾಮಯ್ಯರವ್ರು ಮಧು ಬಂಗಾರಪ್ಪನವರ ರಾಜೀನಾಮೆ ಪಡೆಯಬೇಕು ಇಡಿಗ ಸಮುದಾಯದ ಆರು ಜನ ಶಾಸಕರಲ್ಲಿ ಯಾರಿಗಾದ್ರೂ ಒಬ್ಬರಿಗೆ ಸಚಿವ ಸ್ಥಾನ ನೀಡಲಿ.

ಮಧು ಬಂಗಾರಪ್ಪ ಸಚಿವ ಸ್ಥಾನದಲ್ಲಿ‌ ಕೂರಲು ಲಾಯಕ್ಕಿಲ್ಲ. ಇಡಿಗ ಸಮುದಾಯದ ಸಮಾವೇಶದ ಹೆಸರಲ್ಲಿ ಐದು ಸಚಿವರಲ್ಲಿ ಕೋಟಿ ಕೋಟಿ ಹಣ ಪಡೆದಿದ್ದಾರೆ. ಸಚಿವ ಮಧು ಬಂಗಾರಪ್ಪ ವಿರುದ್ಧ ಗಂಭೀರ ಆರೋಪ ಮಾಡಿದ ಪ್ರಣವಾನಂದ ಶ್ರೀ.

ಮಂತ್ರಿಗಳ ಬಳಿ ಹಣ ಪಡೆದಿಲ್ಲ ಎಂದು ದರ್ಮಸ್ಥಳದಲ್ಲಿ ಮಧು ಬಂಗಾರಪ್ಪ ಪ್ರಮಾಣ ಮಾಡ್ಲಿ. ನಾನು ಮಧು ಬಂಗಾರಪ್ಪ ಎಷ್ಟು ಹಣ ಪಡೆದಿದ್ದಾರೆ ಅಂತ ಪ್ರಮಾಣ ಮಾಡ್ತಿನಿ ಸಚಿವ ಮಧು ಬಂಗಾರಪ್ಪಗೆ ಸವಾಲೆಸೆದ ಪ್ರಣವಾನಂದ ಶ್ರೀ.