ಉ.ಕ ಸುದ್ದಿಜಾಲ ಉಡುಪಿ :

ಇಲಿ ಪಾಷಾಣ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ.

ಬಿನ್ನಿ ಶೈಜು ಥೋಮಸ್ (30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಬಿನ್ನಿ ಶೈಜು ಥೋಮಸ್, ಗಂಡ ಉದ್ಯೋಗದ ನಿಮಿತ್ತ ದುಬೈಯಲ್ಲಿದ್ದರು, ಇವರು ಮಗಳೊಂದಿಗೆ ಗಂಡನ ಮನೆ ಹಂದಾಡಿ ಬೇಳೂರು ಜೆಡ್ಡುಯಲ್ಲಿ ವಾಸವಾಗಿದ್ದರು.

ಮನೆಯ 1 ನೇ ಮಹಡಿಯಲ್ಲಿ ಅತ್ತೆ, ಮಾವ ಮನೆಯ ಕೆಳ ಅಂತಸ್ತಿನಲ್ಲಿ ಬಿನ್ನಿ ಶೈಜು ಬಿನ್ನಿ ಶೈಜು ಥೋಮಸ್ ವಾಸವಾಗಿದ್ದರು. ಅ.26 ರಂದು ರಾತ್ರಿ ಇಲಿಪಾಷ ಸೇವಿಸಿದ್ದರು, ಬಳಿಕ ತೀವ್ರ ವಾಂತಿ ಭೇದಿಯಿಂದ ಅಸ್ವಸ್ಥಗೊಂಡು ಬಳಲುತ್ತಿದ್ದವರನ್ನು ಚಿಕಿತ್ಸೆಗಾಗಿ ಬ್ರಹ್ಮಾವರದ ಅಸ್ಪತ್ರೆಗೆ ಮನೆಯವರು ದಾಖಲು ಮಾಡಿದ್ದರು.

ಬಳಿಕ ವೈದ್ಯರ ಸಲಹೆಯಂತೆ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿನ್ನಿ ಶೈಜು ಥೋಮಸ್ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಒಬ್ಬರೇ ಮಗುವಿನೊಂದಿಗೆ ಒಂಟಿಯಾಗಿ ವಾಸವಾಗಿರುವ ಕೊರಗಿನಲ್ಲಿ ಇಲಿ ಪಾಷಣ ಸೇವಿಸಿದ್ದಾರೆ ಎನ್ನಲಾಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.