ಉ.ಕ‌ ಸುದ್ದಿಜಾಲ ಹುಬ್ಬಳ್ಳಿ :

ಬೆಂಗಳೂರು ನಿಂದ ಮೀರಜ ವರಗೆ ಪ್ರಯಾಣಿಸುತ್ತಿದ್ದ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲು ಸಾಂಗ್ಲಿವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮತ್ತು ಮಹಾರಾಷ್ಟ್ರದ ಮೀರಜ್ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುತ್ತಿದ್ದ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲನ್ನು ಸಾಂಗ್ಲಿ ನಿಲ್ದಾಣವರೆಗೆ ವಿಸ್ತರಿಸಲು ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ.

ಪ್ರಮುಖ ನಗರಗಳ ಸಂಪರ್ಕ ಹೆಚ್ಚಿಸುವ ಮತ್ತು ಆ ಪ್ರದೇಶದ ಜನರಿಗೆ ಪ್ರಯಾಣ ಸುಲಭಗೊಳಿಸುವ ಯೋಜನೆಯು ಈ ಮೂಲಕ ಜಾರಿಯಾಗಿದೆ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.