ಉ.ಕ ಸುದ್ದಿಜಾಲ ಕಾಗವಾಡ :
ಈಗಿನ ದಿನಗಳಲ್ಲಿ ಕೆರೆಗಳು ಗ್ರಾಮೀಣ ಪ್ರದೇಶದ ಜೀವನಾಡಿಗಳು ಅವುಗಳನ್ನು ಅಭಿವೃದ್ಧಿಪಡಿಸಿ ನೀರನ್ನು ಮಿತವಾಗಿ ಬಳಸಿ ಪರಿಸರ ಉಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಆಗಿದ್ದು ಮುಂದಿನ ಪೀಳಿಗೆಗೆ ನೀರು ಹಾಗೂ ಪರಿಸರ ಉಳಿಯ ಬೇಕಾದರೆ ನೀರನ್ನು ಮಿತವಾಗಿ ಬಳಕೆಮಾಡಬೇಕು ಎಂದು ಕವಲಗುಡ್ಡ ಕರಿಯೋಗ ಸಿದ್ದಶ್ರೀ ಆಶ್ರಮದ ಅಮರೇಶ್ವರ ಮಹಾರಾಜರು ಹೇಳಿದರು.
ಬೆಳಗಾಬಿ ಜಿಲ್ಲೆಯ ಕಾಗವಾಡ ತಾಲೂಕಿನ ಕವಲಗುಡ್ಡ ಗ್ರಾಮದಲ್ಲಿ ಧರ್ಮಸ್ಥಳ ಸಂಸ್ಥೆಯ ಗ್ರಾಮೀಣ ಅಭಿವೃದ್ದಿ ಯೋಜನೆಯಡಿ 11 ಲಕ್ಷ ರೂ ವೆಚ್ಚದಲ್ಲಿ ನಮ್ಮೂರ ನಮ್ಮ ಕೆರೆ ಹೂಳೆತ್ತುವ ಕಾರ್ಯ ಪೂರ್ಣಗೊಂಡ ಹಿನ್ನೆಲೆ ಗ್ರಾಮಸ್ಥರಿಗೆ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡುತ್ತ ಈ ಸಂಸ್ಥೆಯ ಗ್ರಾಮೀಣ ಪ್ರದೇಶ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸುವಂತೆ ಮಾಡುತ್ತಿರು ಕಾರ್ಯ ಶ್ಲಾಘನೀಯ.
ಅದರ ಜೋತೆ ಗ್ರಾಮಗಳ ಅಭಿವೃದ್ಧಿಯ ಜೋತೆಗೆ ಮಠ ಮಂದಿರಗಳು,ಶಾಲೆಗಳ ಅಭಿವೃದ್ಧಿ ಮಾಡುತ್ತಿರುವುದು ಮತ್ತೊಂದು ಶ್ಲಾಘನೀಯ ಸರಕಾರ ಮಾಡಬೇಕಾದ ಕಾರ್ಯ ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಅವರು ನಿರ್ಮಾಣ ಮಾಡಿ ಕೊಟ್ಟ ಕೆರೆಯನ್ನು ಗ್ರಾಮಸ್ಥರು ಸ್ವಚ್ಚವಾಗಿ ಇಟ್ಟುಕೊಂಡು ಅದರಲ್ಲಿ ನೀರು ತುಂಬಿಸಿ ಸುತ್ತಮುತ್ತಲಿನ ರೈತರು ಜಮೀನು,ಜನ ಜಾನುವಾರುಗಳಿಗೆ ನೀರನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಜಿಲ್ಲಾ ನಿದೇರ್ಶಕಿ ನಾಗರತ್ನ ಹೆಗಡೆ ಮಾತನಾಡಿ ರಾಜ್ಯದಲ್ಲಿ ಇದುವರಗೆ ಇಂತಹ ಧರ್ಮಸ್ಥಳ ಸಂಸ್ಥೆ ನಮ್ಮ ಊರು ನಮ್ಮ ಕೆರೆ 633 ಕೆರೆಗಳನ್ನು ಹೂಳೆತ್ತುವ ಕಾರ್ಯ ಮುಗಿಸಿ ಗ್ರಾಮಸ್ಥರಿಗೆ ಹಸ್ತಾಂತರ ಮಾಡಲಾಗಿದೆ ಇದು ಕೂಡ ನಮ್ಮ ಸಂಸ್ಥೆಯ 634 ಕೆರೆ ಆಗಿದ್ದು ಇಲ್ಲಿನ ಗ್ರಾಮಸ್ಥರ ಸಹಕಾರದಿಂದ ಒಂದು ತಿಂಗಳ ಅವಧಿಯಲ್ಲಿ ಅಭಿವೃದ್ಧಿಪಡಿಸಿ ಹಸ್ತಾಂತರ ಮಾಡಲಾಗುತ್ತಿದೆ ಇದನ್ನು ಸ್ವಚ್ಚವಾಗಿ ಇಟ್ಟುಕೊಂಡು ಗ್ರಾಮಸ್ಥರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಗ್ರಾ ಪಂ.ಸದಸ್ಯರಾದ ಮಹಾದೇವ ಮಾಳಿ, ದೇವಪ್ಪ ಮಾನಗಾಂವೆ, ಮಹಾದೇವ ಐನಾಪೂರೆ ರಾಜಕುಮಾರ ಮಾನಗಾಂವೆ,ಪರಶುರಾಮ ಅವಳೆ, ಶ್ರೀಕಾಂತ ಹಣಮರಡಿ, ಸಿದ್ದಗೌಡ ಪಾಟೀಲ, ಶೇಖರ ಮೋಠೆ,ಶಿವಪ್ಪ ಹಣಮರಡ್ಡಿ, ಸಂಜೀವ ಮರಾಠಿ, ಸವಿತಾ ದೇಸಾಯಿ,ಶಿವಪ ಶಿಪರಮಟಿ ಸೇರಿದಂತೆ ಮಹಿಳೆಯರು ಇದ್ದರು.