ಉ.ಕ ಸುದ್ದಿಜಾಲ ಮೈಸೂರು :

ಮೈಸೂರು – ಕೊಡಗು ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ‌ ಮಾಡಲು ಯಾರಿಗೆ ಟಿಕೇಟ್ ಸಿಗುತ್ತೆ ಎನ್ಉವ ಗೊಂದಲದ ನಡುವೆ ಒಂದೆಡೆ ಪ್ರತಾಪ್‌ ಸಿಂಹ ಟಿಕೆಟ್ ಕೊಡಿ ಅಂತ ಪ್ರತಿಭಟನೆ‌ ಮಡುತ್ತಿದ್ದಾರೆ.

ಮತ್ತೊಂದೆಡೆ ಮಹರಾಜರು ರಾಜಕೀಯಕ್ಕೆ ಬರಬೇಡಿ ಅಂತ ಹೆಚ್ಚಾದ ಕೂಗ. ಮಹರಾಜರು‌ ಕೊಡಬೇಕು, ಮತಕ್ಕಾಗಿ‌ ಬೇಡುವುದು ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾದ ಪೋಸ್ಟ್ ಗಳು.

ಮೈಸೂರು ರಾಜ ವಂಶಸ್ಥರ ಕೊಡುಗೆ ಈ ನಾಡಿಗೆ ಅಪಾರವಾಗಿದೆ, ಅದನ್ನು ಎಣಿಕೆ ಮಾಡಲಿಕ್ಕು ಸಾಧ್ಯವಿಲ್ಲ…
ನಮ್ಮ ಮಹಾರಾಜರನ್ನು ಇದೇ ವೈಭೋಗದಿಂದ ನೋಡಲು ಬಯಸುತ್ತೇವೆ.

ಮಹರಾಜರು ರಸ್ತೆಗಳಲ್ಲಿ ಮತಕ್ಕಾಗಿ ಜನರನ್ನು ಬೇಡೋ ಪರಿಸ್ಥಿತಿಯಲ್ಲಿ ನೋಡಲು ಇಷ್ಟವಿಲ್ಲ, ಅವರು ಕೊಡಬೇಕೇ ಹೊರತು ಬೇಡೋದು ಬೇಡ, ನಮ್ಮ ರಾಜರು ನಮ್ಮ ಹೆಮ್ಮೆ.