ಉ.ಕ ಸುದ್ದಿಜಾಲ ವಿಜಯಪೂರ :

ಉತ್ತರ ಕರ್ನಾಟಕ ಭಾಗದಲ್ಲಿ ತನ್ನದೇಯಾದ ಕಾಲಜ್ಞಾನ ಹೊಂದಿರುವ ವಿಜಯಪೂರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬೆಂಕಿ ಬಬಲಾದಿ ಮೂಲ ಮಠದ ಕಾಲಜ್ಞಾನ ಹೀಗಿದೆ. ರಾಜಕೀಯದಲ್ಲಿ ಗೊಂದಲ ಉಂಟಾಗುತ್ತೆ, ಅವರಲ್ಲಿ ಕಾಲೆಳೆಯುವ ಜನ ಹೆಚ್ಚಾಗುತ್ತದೆ.

ಬಬಲಾದಿ ಸದಾಶಿವ ಚಿಕ್ಕಯ್ಯ ಮುತ್ಯಾನ ಮೂಲ ಮಠದ ಕಾಲಜ್ಞಾನ

ಕಾಂಗ್ರೆಸ್ ಸರ್ಕಾರದಲ್ಲಿ ಗೊಂದಲದ ಮುನ್ಸೂಚನೆ ನೀಡಿತಾ ಬಬಲಾದಿ ಮಠದ ಭವಿಷ್ಯವಾಣಿ ಎಂದು ಪ್ರಶ್ನೆ ಮೂಡಿದೆ. ಉತ್ತಮ ವ್ಯಕ್ತಿ ಗೆಲುವು ಆಗುತ್ತೆ ಅಂತ ಭವಿಷ್ಯವಾಣಿ ನುಡಿದ ಬಬಲಾದಿ‌ ಅಜ್ಜ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತಮ ವ್ಯಕ್ತಿಗೆ ಗೆಲುವು ಅಲ್ಲಲ್ಲಿ ರಾಜಕೀಯ ಗೊಂದಲಗಳು ಉಂಟಾಗುತ್ತವೆ. ಅವರವರಲ್ಲಿಯೇ ಕಾಲ ಎಳೆಯುವಂತವರ ಜನ ಹೆಚ್ಚಾಗುತ್ತದೆ. ಆಡಂಬರ ಜೀವನ ನಡೆಸುವರ ಸಾಲಬಾಧೆ ಹೆಚ್ಚಾಗುತ್ತದೆ.

ಧರ್ಮ ಧರ್ಮದ ನಡುವೆ ಈ ವರ್ಷ  ಕಿತ್ತಾಟ ಆಗುತ್ತದೆ. ಉತ್ತಮ ಅರ್ಹ ವ್ಯಕ್ತಿಯ ಮರ್ಧನ ಆಗುತ್ತದೆ. ಗಡಿ ಕಾಯುವ ಯೋಧರಿಗೆ ಸ್ವಲ್ಪ ನೋವು ಉಂಟು ಆಗುತ್ತದೆ. ರಾಜಕೀಯದಲ್ಲಿ ಉತ್ತಮ ವ್ಯಕ್ತಿಯ ಗೆಲುವು ಆಗುತ್ತದೆ.

ಬಬಲಾದಿ ಸದಾಶಿವ ಚಿಕ್ಕಯ್ಯ ಮುತ್ಯಾನ ಮೂಲ ಮಠದ ಕಾಲಜ್ಞಾನ

ಈ ವರ್ಷ ಸಾಧಾರಣ ಮಳೆ, ಬೆಳೆಗಳಿಗೆ ಕೀಟಬಾಧೆ ಹೆಚ್ಚಳ‌ ಆಗುತ್ತೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಮುತ್ಯಾನ ಮೂಲ ಮಠ. ಹೊಳೆ ಬಬಲಾದಿ ಮಠದ ಪೀಠಾಧಿಪತಿ ಸಿದ್ಧರಾಮಯ್ಯ ಹೊಳಿಮಠರಿಂದ  ಭವಿಷ್ಯವಾಣಿ..

ಶಿವರಾತ್ರಿ ಅಮಾವಾಸ್ಯೆ ಬಳಿಕ ಎರಡನೇ ದಿನಕ್ಕೆ ಪ್ರತಿವರ್ಷ ನುಡಿಯಲಾಗುವ ಕಾಲಜ್ಞಾನ ಭವಿಷ್ಯವಾಣಿ. ವ್ಯಾಪಾರಸ್ಥರಿಗೆ ಮಧ್ಯಮ ಫಲ ಇದೆ. ಮಳೆ, ಬೆಳೆ, ಫಲ ಕಂಡ ಮಂಡಲ ಆಗುತ್ತದೆ. ಶಿಶುಗಳಿಗೆ ರೋಗಬಾಧೆ ಇದೆ.

ಕುಲ, ಜಾತಿಗಳಲ್ಲಿ ಕಲಹ ಜಾಸ್ತಿ ಆಗುತ್ತದೆ. ಧಾನ್ಯಗಳು, ರಸವರ್ಗಗಳು ಮಾರುತ್ತವೆ. ಉತ್ತರಕ್ಕೆ ಬರ ಇದೆ  ಕೇಡು ಇದೆ. ದೊಡ್ಡ ದೊಡ್ಡ ಮಹಾನರ ಯೋಗ ಅಳಿಯುವುದು. ಕಣ್ಣಿನ ಕಾಯಿಲೆಗಳು ಜಾಸ್ತಿ ಆಗುತ್ತದೆ.

ವೈಶಾಖ ಜ್ಯೇಷ್ಠ ಮಾಸದಲ್ಲಿ  ನೆಮ್ಮದಿ ಶಾಂತಿ ಯಶಸ್ಸು, ಸಿಗುತ್ತದೆ. ಭಯೋತ್ಪಾದನೆ, ನೈಸರ್ಗಿಕ ವಿಕೋಪದ ಹೊಸ ಸುಳಿವು ಇದೆ. ಲಿಂಗ ಸಮಾನತೆ ಎಲ್ಲರೂ ಒಂದೇ ಎನ್ನುವ ಕಾಲ ಬಂದಿತಣ್ಣ ಎಂಬ ಭವಿಷ್ಯವಾಣಿ ನುಡಿಯಲಾಗಿದೆ.