ಉ.ಕ ಸುದ್ದಿಜಾಲ ಬೆಳಗಾವಿ :
ಡಿ.2 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಹಿನ್ನೆಲೆ. ಈ ಬಾರಿ ಬರೋಬ್ಬರಿ ಏಳು ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ. ಇದೇ ಮೊದಲ ಬಾರಿಗೆ ಅತೀ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ.
ಪೊಲೀಸರ ವಾಸ್ತವ್ಯಕ್ಕೆ ನಿರ್ಮಾಣಗೊಂಡಿದೆ ಬೃಹತ್ ಟೌನ್ ಶೀಪ್. ಸುವರ್ಣ ಸೌಧದ ಸಮೀಪದಲ್ಲಿ ನಿರ್ಮಾಣವಾಗಿದೆ ಟೌನ್ ಶಿಪ್. ಜರ್ಮನ್ ಟೆಂಟ್ ಹಾಕಿ ಕಾಟ್, ಬೆಡ್, ಬೆಡ್ ಶೀಟ್ ವ್ಯವಸ್ಥೆ. ಒಂದೇ ಸ್ಥಳದಲ್ಲಿ ಎರಡೂವರೆ ಸಾವಿರ ಪೊಲೀಸ್ ಸಿಬ್ಬಂದಿಗೆ ವಾಸ್ತವ್ಯದ ವ್ಯವಸ್ಥೆ.
ಬಿಸಿ ನೀರಿನ ವ್ಯವಸ್ಥೆ, ವಾಸ್ತವ್ಯದ ಸ್ಥಳದಲ್ಲೇ ಊಟದ ವ್ಯವಸ್ಥೆ. ಟೌನ್ ಶೀಪ್ ಗೆ ಪೊಲೀಸ್ ಕಮಿಷನರ್ ಪ್ರಕಾಶ್ ನಿಕ್ಕಂ ಭೇಟಿ ಪೊಲೀಸ್ ಸಿಬ್ಬಂದಿ ವಾಸ್ತವ್ಯ, ಊಟದ ವ್ಯವಸ್ಥೆ ಪರಿಶೀಲನೆ. ಯಾವುದಕ್ಕೂ ಕಮ್ಮಿ ಆಗದ ರೀತಿಯಲ್ಲಿ ನೋಡಿಕೊಳ್ಳಲು ಸೂಚನೆ.
ಟೌನ್ ಶಿಪ್ ನಲ್ಲಿ ಪೊಲೀಸರಿಗೆ ಮನೋರಂಜನೆ ವ್ಯವಸ್ಥೆ. ಒಂದು ವೈದ್ಯಕೀಯ ತಂಡ ಹಾಗೂ ಅಗ್ನಿಶಾಮಕ ತಂಡ ಕೂಡ ನಿಯೋಜನೆ. ಸುವರ್ಣ ಸೌಧ ಒಳಗೆ, ಹೊರಗೆ, ಪ್ರತಿಭಟನಾ ಸ್ಥಳ ಸೇರಿ ಎಲ್ಲ ಕಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ
