ಉ.ಕ ಸುದ್ದಿಜಾಲ ವಿಜಯಪುರ :

ನನಗೇನು ಹಾರ್ಟ್ ಅಟ್ಯಾಕ್ ಆಗಿದೆಯಾ…? ಕೈ ಕಾಲು ಮುರಿದಿದೆಯಾ… ಎಲ್ಲವೂ ಬರೊಬ್ಬರಿ ಇದೆ, ಬ್ಲಡ್ ಚೆಕ್ ಮಾಡಿದಾಗ ರಿಪೊರ್ಟ್ ಸರಿಯಾಗಿ ಬರಲಿಲ್ಲ. ಟೈಮ್ ಬಿಟ್ಟು ಟೈಮ್ ಜ್ವರ ಬರತಾ ಇತ್ತು. ಹೀಗಾಗಿ ಕೆಲ ದಿನ ರೆಸ್ಟ್ ಮಾಡಿದೆ ಎಂದು ಖಾರವಾಗಿ ಮಾಧದಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿಜಯಪುರ ಶಾಸಕ ಬಸನಗೌಡ ಯತ್ನಾಳ

ಯತ್ನಾಳ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದೆ ಎಂಬ ವಿಚಾರ ವಿಜಯಪುರ ದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ. ನನಗೇನು ಹಾರ್ಟ್ ಅಟ್ಯಾಕ್ ಆಗಿಲ್ಲ, ಲಕ್ವಾ ಆಗಿಲ್ಲ ಗಟ್ಟಿ ಇದ್ದೇನೆ, ವಿರೋಧಿಗಳಿಗೆ ಯತ್ನಾಳ ಯಾವಾಗ ಸಾಯತಾನ ನಾವು ಯಾವಾಗ ಎಂ ಎಲ್ ಎ ಆಗೋನು ಅನ್ನೋರು ಇರತಾರೆ.

ವಿಜಯಪುರ ಅಭಿವೃದ್ಧಿ ನೋಡಿ ಅವರಿಗೆ ಸಹಿಸಲು ಆಗುತ್ತಿಲ್ಲ. ಇವತ್ತು ಮೈಸೂರು, ಚಾಮರಾಜನಗರ ಎಲ್ಲಿ ಬೇಕಾದರೂ ವಿಜಯಪುರ ಅಂತಾ ಹೇಳಿದರೆ ಯತ್ನಾಳ ಊರಾ ಎನ್ನುತ್ತಿದ್ದರು. ಮೊದಲು ಗೋಳಗುಮ್ಮಟದ ಊರಾ ಅನ್ನೋರು ಈಗ ಯತ್ನಾಳ ಊರಾ ಅನ್ನುತ್ತಿದ್ದಾರೆ. ಇದು ವಿರೋಧಿಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದ ಶಾಸಕ ಯತ್ನಾಳ.