ಉ.ಕ ಸುದ್ದಿಜಾಲ ನಿಪ್ಪಾಣಿ :

ಪ್ರೀಯಂಕಾ ಜಾರಕಿಹೋಳಿ ಲೋಕಸಭೆಗೆ ಸ್ಪರ್ಧೆ ವಿಚಾರವಾಗಿ ಯೂ ಟರ್ನ್ ಹೋಡೆದ ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೋಳಿ ಅವರು ಮಗಳನ್ನ ಸ್ಪರ್ಧೆಗೆ ಇಳಿಸಲ್ಲ ಎನ್ನುತ್ತಲೆ ಕಾದು ನೋಡುವ ಎಂದ ಸಚಿವ ಸತೀಶ್ ಜಾರಕಿಹೋಳಿ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಆಯೋಜಿಸಿದ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಕಾರ್ಯಕ್ರಮದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು ಮಗಳನ್ನ ಸ್ಪರ್ಧೆಗೆ ಇಳಿಸಲ್ಲ ಎಂದಿದ್ದ ಸತೀಶ್ ಈಗ ಹೈಕಮಾಂಡ ಸೂಚನೆಗೆ ಕಾಯುವುದಾಗಿ ಹೇಳಿಕೆ ನೀಡಿದ್ದಾರೆ.

ಟಿಕೇಟ್ ವಿಚಾರದಲ್ಲಿ ಯಾವುದೆ ಗೊಂದಲ ಇಲ್ಲಾ. ಚುನಾವಣೆಗೆ ಇನ್ನು ಟೈಮ್ ಇದೆ ಘೋಷಣೆ ಆಗುತ್ತೆ ಹಾಲುಮತ ಸಮಾಜಕ್ಕೆ ಚಿಕ್ಕೋಡಿ ಟಿಕೇಟ್ ನೀಡಬೇಕು ಎಂಬ ನಮ್ಮ ವಿಚಾರ ಹೇಳಿದ್ದೇವೆ ಅಂತಿಮವಾಗಿ ಹೈಕಮಾಂಡ ನಿರ್ಧಾರ ಮಾಡಲಿದೆ ಎಂದರು.

ರಾಜ್ಯದಲ್ಲಿ ಈಗಾಗಲೇ ಕಳಿಸಿದ ಕೆಲ ಅಭ್ಯರ್ಥಿಗಳ ಹೆಸರು ತಿರಸ್ಕಾರ ಮಾಡಿದ್ದಾರೆ. ಸರ್ವೆ ಬಳಿಕ ಹೊಸ ಅಭ್ಯರ್ಥಿಗಳ ಹೆಸರು ಸೂಚಿಸಲು ಹೇಳಿದ್ದಾರೆ ಆ ರೀತಿಯ ಚರ್ಚೆಗಳು ಸಹ ನಡಿತಾ ಇದ್ದಾವೆ.

ಪ್ರೀಯಂಕಾ ಜಾರಕಿಹೋಳಿಗೆ ಟಿಕೇಟ್ ನೀಡುವ ವಿಚಾರ ಚರ್ಚೆಯಲ್ಲಿ ಇದೆ ಬೆಳಗಾವಿಯಿಂದ ಸ್ಪರ್ಧಿಸುವ ವಿಚಾರ ಕೂಡ ಚರ್ಚೆ ನಡಿತಾ ಇದೆ ಇನ್ನು ಅಂತಿಮವಾಗಿಲ್ಲಾ. ಅಳೆದು ತೂಗಿ ಅಂತಿಮ ಮಾಡಲಾಗುತ್ತದೆ ಎಂದರು.

ಪ್ರಿಯಂಕಾ ಜಾರಕಿಹೋಳಿ ಚಿಕ್ಕೋಡಿ ಲೋಕಸಭೆಯಿಂದ ಸ್ಪರ್ಧೆ ವಿಚಾರವಾಗಿ‌ ಪ್ರತಿಕ್ರಿಯಿಸಿದ ಅವರು ಚಿಕ್ಕೋಡಿಯಿಂದ ಕೂಡ ಚರ್ಚೆ ನಡೆಯುತ್ತಿದೆ. ಜಿಲ್ಲೆಯ ವರಿಷ್ಠರನ್ನು ಕೂಡಿಸಿ ಅಂತಮ ಮಾಡಲಾಗುವುದು ಎಂದರು.

ಚುನಾವಣಾ ಬಾಂಡ್ ಗಳ ಕುರಿತು ಎಸ್.ಬಿ.ಐ ಗೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೋರ್ಟ್ ಏನ್ ಕೆಳುತ್ತಿದೆ ಅದನ್ನ ಕೊಡಲೆಬೇಕು.

ಮುಚ್ಚಿಡುವ ಪ್ರಶ್ನೆಯೆ ಬರಲ್ಲ. ಕೊಡಲೆ ಬೇಕು ಎನ್ನುವುದು ನಮ್ಮ ಆಗ್ರಹ. ಇಂದು ಸಂಜೆ ವರೆಗೂ ಕಾದು ನೋಡುತ್ತೇವೆ ಏನ್ ಆಗಲಿದೆ ಎಂಬುದು ಎಂದು ಪ್ರತಿಕ್ರಿಯೆ ನೀಡಿದ ಸಚಿವ ಸತೀಶ ಜಾರಕಿಹೋಳಿ.