ಉ.ಕ ಸುದ್ದಿಜಾಲ ಧಾರವಾಡ :

ಧಾರವಾಡದಲ್ಲಿ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ 2 ಎ ಮೀಸಲಾತಿ ಹೋರಾಟಗಾರರ ಸಭೆ ಕರೆದ ಸಿಎಂ ಸಿದ್ದರಾಮಯ್ಯ ಶುಕ್ರವಾರ ಅಕ್ಟೋಬರ್ 18 ರಂದು ಸಭೆ ಕರೆಯಲಾಗಿದೆ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ.

2 ಎ ಮೀಸಲಾತಿ ಹೋರಾಟಗಾರರ ಸಭೆ ಕರೆದ ಸಿಎಂ ಸಿದ್ದರಾಮಯ್ಯ

2 ಎ ಮೀಸಲಾತಿ ಹೋರಾಟ ನಮಗೆ ಜಯ ಸಿಗುವವರೆಗೆ ಇರಲಿದೆ ಹಿಂದೆ ಸಿಎಂ ಅವರು ಸ್ಪಂದನೆ ಮಾಡಲಿಲ್ಲ 2 ನೇ ಹಂತದ ಚಳುವಳಿ ಈಗ ವಕೀಲರಿಂದ ಆರಂಭವಾಗಿದೆ ಬೆಳಗಾವಿಯಲ್ಲಿ ವಕೀಲರ ಸಮಾವೇಶ ಮಾಡಿದ್ದೇವೆ.

ಮಕ್ಕಳಿಗೋಸ್ಕರ ಸ್ವಾಮೀಜಿ ಹೋರಾಟ ಮಾಡುತಿದ್ದಾರೆ ಎಂದು ಬೆಂಬಲ ಸಿಕ್ಕಿದೆ. ಶಾಸಕ ವಿನಯ ಕುಲಕರ್ಣಿ ಅವರ ಮಧ್ಯಸ್ಥಿಕೆ ಯಲ್ಲಿ ಸಿಎಂ ಅವರ ಜೊತೆ ಸಂಧಾನ ಮಾಡಿದ್ದಾರೆ ಸಿಎಂ ಅವರೇ ಕರೆ ಮಾಡಿ ವಿಜಯ ದಶಮಿ ನಂತರ ಸಭೆ‌ ಕಡೆಯುವ‌ ಮಾತನ್ನ ಹೇಳಿದ್ರು

ನಾವು ಹೀಗಾಗಿ ಹೋರಾಟ ತಡೆದಿದ್ದೇವೆ ಎರಡು ಸಭೆ ಕರೆದರೂ ಮಾತು ತಪ್ಪಿದ್ದರು. ಸಿಎಂ ಕಾರ್ಯದ ಒತ್ತಡದಿಂದ ನಮಗೆ ಕರೆದಿರಲಿಲ್ಲ ಸಿಎಂ ಶುಕ್ರವಾರ ಆಡಳಿತಾತ್ಮಕ ಸಭೆ ಕರೆದಿದ್ದು ಸಮಾಧಾನ ತಂದಿದೆ.

ಒಂದುವರೆ ವರ್ಷದಲ್ಲಿ ಸಭೆ ಕರೆಯುವ ಮಾತನ್ನು ಹೇಳಿದ್ದ ಸಿಎಂ ದಿಢಿರ್ ರದ್ದು ಮಾಡಿದ್ದರು. ವಕೀಲರ ಮಾತಿಗೆ ಸ್ಪಂದನೆ ಮಾಡಿ ಇದೇ 18 ಕ್ಕೆ ಸಭೆ ಕರೆದಿದ್ದಾರೆ. 11 ಜನರ ವಕೀಲರ ಜೊತೆ ಸಭೆ ನಡೆಯಲಿದೆ.

ಎಲ್ಲ ಶಾಸಕರು ಭಾಗಿಯಾಗ ಬೇಕು. ನಾನು ಶಾಸಕರಿಗೆ ವೈಯಕ್ತಿಕ ಕರೆ ಮಾಡಲ್ಲ. ನಮ್ಮ ಸಮುದಾಯದ ಮಾಜಿ ಶಾಸಕರು ಹಾಗೂ ಶಾಸಕರು ಬರಬೇಕು. ವಕೀಲರ ನಿಯೋಗದ ಸಭೆ ಇದು. ನಾವು 11 ಜನರ ವಕೀಲರನ್ನ ಸಭೆಗಾಗಿ ನೇಮಕ ಮಾಡಿದ್ದೇವೆ.

ಸರ್ಕಾರದ ಸ್ಪಂದನೆ ಸಿಗುವ ಭರವಸೆ ಇದೆ. ನಾನು ಸಿಎಂ ಅವರಿಗೆ ಮನವಿ ಮಾಡ್ತೆನೆ. ಈಗ ಹೋರಾಟಕ್ಕೆ ಜಯ ಸಿಗಲಿ ಎಂದು ಮನವಿ. ನಾವು ಬಡವರು, ಆರ್ಥಿಕವಾಗಿ ಹಿಂದಿದ್ದೇವೆ.

ನಾಡಿನ ಎಲ್ಲ‌ ವಕೀಲರಿಗೆ ಮನವಿ ಮಾಡ್ತೆನೆ. ಗುರುಗಳ ಮನವಿ ತಿಳಿದು ಬೆಂಗಳೂರಿಗೆ ಬರಬೇಕು. ಎಲ್ಲ ಪದಾಧಿಕಾರಿಗಳು ಬರಬೇಕು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಕರೆಯಲಾಗಿದೆ.

ಕುಲಶಾಸ್ತ್ರ ಅಧ್ಯಯನ ನಮಗೆ ಸಂಬಂಧ ಇಲ್ಲ ನಮ್ಮದು ಸಮೀಕ್ಷೆ ಮಾಡಿದ್ದಾರೆ, ಅದರ ಆಧಾರದ ಮೇಲೆ ಮಧ್ಯಂತರ ವರದಿ ಕೊಡಲಾಗಿದೆ. ಇದರಲ್ಲಿ ಮೀಸಲಾತಿ‌ ಕೊಡಬೇಕು ಎಂದು ಇದೆ. ಜಯಪ್ರಕಾಶ ಅವರು ವರದಿ‌ ಕೊಟ್ಟಿದ್ದಾರೆ 2 ಡಿ ಮೀಸಲಾತಿ ಕೊಟ್ಟ ಕೆಸ್ ಸುಪ್ರೀಂ ಕೋರ್ಟ್ ನಲ್ಲಿ ಇದೆ.

ಅದಕ್ಕೆ ಸ್ಟೇ ಸಿಕ್ಕಿದೆ ಅದು ಬೇರೆ ವಿಚಾರ ನಮಗೆ ಸಿಗಬೇಕಾದ 2 ಎ ಮೀಸಲಾತಿ ಸರ್ಕಾರ ಘೋಷಣೆ ಮಾಡಲಿ ಸಿಎಂ ಜಾಣರು, ಅವರು ಮಾತುಕತೆ ಮಾಡಿ ಪ್ರವರ್ಗಕ್ಕೆ ಸೇರಿಸಬಹುದು.