ಉ.ಕ ಸುದ್ದಿಜಾಲ ಹುಕ್ಕೇರಿ :

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಕಳೆದ ರಾತ್ರಿ ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ಹಿಂದೂ ಮುಸ್ಲಿಂ ನಡುವೆ ಗಲಾಟೆ ನಡೆದಿದೆ.

ರಾತ್ರಿ 11 ಗಂಟೆ ಸುಮಾರು ಶುರುವಾದ ದೇವಿ ಮೆರವಣಿಗೆ ಗ್ರಾಮದ ಮಸೀದಿ ಎದುರು ಹಾದು ಹೋಗುವ ವೇಳೆ ಸೌಂಡ್ ಸಿಸ್ಟಮ್ ಬಂದ್ ಮಾಡುವಂತೆ ಕೆಲ ಮುಸ್ಲಿಮರು ತಕರಾರು ತೆಗೆದಿದ್ದಾರೆ.

ಆಗ ಪೊಲೀಸರ ಮದ್ಯ ಪ್ರವೇಶಿಸಿ ಮೆರವಣಿಗೆಯನ್ನ ಮುಂದೆ ಕಳಿಸಿದ್ರು. ಮೂರ್ತಿ ವಿಸರ್ಜನೆ ಮಾಡಿ ಪ್ರಸಾದ ಮುಗಿಸಿಕೊಂಡು ವಾಪಸ್ ಆಗುವ ವೇಳೆ ಅಮಿತ ನಾಯಿಕ ಹಾಗೂ ಪೈರೋಜ್ ಎಂಬುವವರ ಮದ್ಯೆ ಮತ್ತೆ ಅದೆ ವಿಚಾರವಾಗಿ ಗಲಾಟೆ ಶುರುವಾಗಿದೆ ಅಲ್ಲದೆ ಪೈರೊಜ್ ತನ್ನ ಜೋತೆಗೆ 15 ಮುಸ್ಲಿಂ ಯುವಕರನ್ನ ಕರೆದುಕೊಂಡು ಬಂದು ಅಮಿತ್ ಮೇಲೆ ಹಲ್ಲೆಯನ್ನು ಸಹ ಮಾಡಿದ್ದಾನೆ.

ಅಷ್ಟಕ್ಕೆ ಸುಮ್ಮನಾಗದ ಮುಸ್ಲಿಂ ಯುವಕರು ಮಸಿದಿಯ ಮೈಕ ನಲ್ಲಿ ಮುಸ್ಲಿಂಮರ ಮೇಲೆ ಹಲ್ಲೆಯಾಗಿದೆ ಎಲ್ಲರೂ ಮಸಿದಿಗೆ ಬರುವಂತೆ ಕರೆ ಕೊಟ್ಟಿದ್ದ. ಇನ್ನು ಕರೆ ಕೊಡುತ್ತಿದ್ದಂತೆ ಗಲಾಟೆ ದೊಡ್ಡ ಮಟ್ಟಕ್ಕೆ ತಿರುಗಿದೆ. ಇದೆ ವೇಳೆ ಕೆಲ ಕಿಡಿಗೇಡಿಗಳು ಬೈಕ್ ಗಳಿಗೆ ಬೆಂಕಿ ಹಚ್ಚಿ ಒಂದು ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

ಇನ್ನು ಗಲಾಟೆ ಜೋರಾಗುತ್ತಿದ್ದಂತೆ ಸ್ಥಳಕ್ಕೆ ಸಂಕೇಶ್ವರ ಪೊಲೀಸರ ದೌಡಾಯಿಸಿದ್ದಾರೆ. ಎರಡು ಸಮುದಾಯದ ಜನರನ್ನ ಚದುರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ.

ಇನ್ನು ಹಿಂದು ಯುವಕರನ್ನ ಟಾರ್ಗೆಟ್ ಮಾಡಿ ಕೆಸರಿ ಶಾಲು ಧರಿಸಿದ್ದ ಯುವಕರ ಮೇಲೆ ಕಲ್ಲು, ಕಬ್ಬಿನದ ರಾಡಗಳ ಮೂಲಕ ಹಲ್ಲೆ ಮಾಡಿದ್ದಾರೆ ಎಂದು ಹಿಂದು ಯುವಕರು ಆರೋಪಿಸಿದ್ದಾರೆ. ಬಹಲ್ಲೆಗೊಳಗಾದ 5 ಜನ ಹಿಂದು ಯುವಕರು ಸಂಕೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೆರವಣಿಗೆ ವೇಳೆ ನಡೆದ ಗಲಾಟೆಯಿಂದಾಗಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮದಲ್ಲಿ 2 ಕೆ.ಎಸ್.ಆರ್.ಪಿ ತುಕುಡಿಗಳನ್ನ ನಿಯೋಜನೆ ಮಾಡಲಾಗಿದ್ದು ಸದ್ಯ ಗ್ರಾಮದಲ್ಲಿ ಶಾಂತಿ ಸಭೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.