ಉ.ಕ ಸುದ್ದಿಜಾಲ ತುಮಕೂರು :

ಸದ್ಯದ ಕಾಲಗಟ್ಟದಲ್ಲೂ ಸಹ ದೇವರ ಮೋರೆ ಹೋಗುವುದು ದೇವರ ವಾಡಿಕೆಯಂತೆ ನಡೆಯುತ್ತೇವೆ ಅನ್ನೋದಕ್ಕೆ ಇಲ್ಲೊಂದು ತಾಜಾ ಉದ್ದಾಹರಣೆ ನೋಡಬಹುದು ದೇವರ ಮಾತು ಕೇಳಿ ಹೆಂಡತಿಗೆ ವಿಚ್ಛೇದನ ನೀಡಲು ಮುಂದಾದ ಪತಿರಾಯ‌

ಹೌದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಇಂತದೊಂದು ಘಟನೆ ನಡೆದಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ಮಂಜುನಾಥ್ ಹಾಗೂ ಪಾರ್ವತಮ್ಮ ದಂಪತಿಗಳು. ಐದಾರು ವರ್ಷಗಳ ಹಿಂದೆ ಮದುವೆಯಾಗಿದ್ರು.

ದೇವರ ಮಾತು ಕೇಳಿ ಮೂಡನಂಬಿಕೆಗೆ ಒಳಗಾಗಿ ಪತ್ನಿಗೆ ವಿಚ್ಚೇದನ ನೀಡಲು ಕೊರ್ಟ್ ಮೆಟ್ಟಿಲೇರಿದ್ದ ಮಂಜುನಾಥ್. ನ್ಯಾಯಾಧೀಶರ ಮಾತು ಕೇಳಿ ಪತ್ನಿ ಜೊತೆ ಬಾಳಲು ಒಪ್ಪಿದ ಪತಿರಾಯ.

ಚಿಕ್ಕನಾಯಕನಹಳ್ಳಿ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ವೆಂಕಟೇಶಪ್ಪ ನವರ ಬುದ್ದಿ ಮಾತು ಕೇಳಿ. ನ್ಯಾಯಾಲಯದಲ್ಲೇ ಹಾರ ಬದಲಾಯಿಸಿ ಇಬ್ಬರು ಒಟ್ಟಿಗೆ ಬಾಳಲು ನಿರ್ಧರಿಸಿದ ದಂಪತಿಗಳು. ದಂಪತಿಗಳಿಗೆ ಶುಭ ಹಾರೈಸಿದ ನ್ಯಾಯಾಧೀಶರು.