ಉ.ಕ ಸುದ್ದಿಜಾಲ ಕಾಗವಾಡ :

ಆಟೋ ಹಾಗೂ ಇರಟಿಗಾ ಕಾರು ಮುಖಾ ಮುಖಿ ಡಿಕ್ಕಿ ಓರ್ವ ಸಾವು ಹಲವರಿಗೆ ಗಂಭೀರ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಹಾಗೂ ಉಗಾರ ಮಧ್ಯದಲ್ಲಿ ಈ ಅಪಘಾತ ನಡೆದಿದೆ ಉಗಾರ ಕಡೆಯಿಂದ ಟಂಟಂ ಹಾಗೂ ಐನಾಪೂರದಿಂದ ಉಗಾರ ಕಡೆಗೆ ಹೊರಟಿದ್ದ ಈರಟಿಗಾ ಕಾರು ಅಪಘಾತದಲ್ಲಿ ಓರ್ವ ಸಾವು ಹಲವರಿಗೆ ಗಾಯ.

ಮೃತ ವ್ಯಕ್ತಿ ವಿನೋದ ಕಾಂಬಳೆ (24) ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರ ನಿವಾಸಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ. ಗಾಯಾಳುಗಳನ್ನ ಪಕ್ಕದ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಮಿರಜ ಪಟ್ಣಕ್ಕೆ ಚಿಕಿತ್ಸೆ ನೀಡಲು ಕರೆದೊಯ್ಯಲಾಗಿದೆ. ಆಟೋದಲ್ಲಿದ್ದ ಎಲ್ಲ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.

ನಾಲ್ಕು ಜನರುಗೆ ತೀವ್ರ ಗಂಭೀರ ಗಾಯಗಳಾಗಿವೆ. ಗಾಯಾಳುಗಳು, ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ, ಕೃಷ್ಣಾ ಕಿತ್ತೂರ, ಬನಜವಾಡ ಹಾಗೂ ಸಾಂಗಲಿಯ ಮೂರು ಜನ ಎಂದು ತಿಳಿದು ಬಂದಿದೆ ಸ್ಥಳಕ್ಕೆ ಕಾಗವಾಡ ಪೋಲಿಸರು ಬೇಟಿ ನೀಡಿ ಪರಶೀಲನೆ‌ ನಡೆಸಿದ್ದಾರೆ.