ಉ.ಕ ಸುದ್ದಿಜಾಲ ಬೆಳಗಾವಿ :
ಹೆಂಡತಿಯರಿಗೆ ಬೇರೆ ಸಂಬಂಧ ಇದ್ರೆ ಡೈವೋರ್ಸ್ ನೀಡಿ ಹೋಗಿ ಆದರೆ ಕಟ್ಟಿಕೊಂಡ ಗಂಡನನ್ನು ಕೊಲೆ ಮಾಡಬೇಡಿ ಬೆಳಗಾವಿಯಲ್ಲಿ ಪ್ರತಿಭಟನೆ ವೇಳೆ ಕರವೇ ರಾಜ್ಯ ಸಂಚಾಲಕ ವಿಶಿಷ್ಟ ಮನವಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ವಿಶಿಷ್ಟ ಮನವಿ ಬೆಳಗಾವಿಯಲ್ಲಿ ಪತ್ನಿ, ಪ್ರಿಯಕರನಿಂದ ಪೇಂಟರ್ ರಮೇಶ್ ಕಾಂಬಳೆ ಹತ್ಯೆ ಪ್ರಕರಣ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಪ್ರತಿಭಟನೆ ಬೆಳಗಾವಿಯ ಚನ್ನಮ್ಮ ವೃತ್ತದಿಂದ ಡಿಸಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ
ರಮೇಶ್ ಕಾಂಬಳೆ ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಿ ಎಂದು ಘೋಷಣೆ. ‘ಚೋರ್ಲಾ ಘಾಟ್ ಚಮೇಲಿ’ಗೆ ಧಿಕ್ಕಾರ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು. ಹೆಂಡತಿಗೆ ಮನಸ್ಸಿಲ್ಲದಿದ್ರೆ ಗಂಡ ಮೈ ಮುಟ್ಟಬಾರದು ಅಂತಾ ಕಾನೂನಲ್ಲೇ ಅವಕಾಶ ಇದೆ. ನಿಮಗೆ ಗಂಡ ಬೇಡವಾದ್ರೆ ಗಂಡನಿಗೆ ಡೈವೋರ್ಸ್ ಕೊಟ್ಟು ಹೋಗಿ.
ಆದ್ರೆ ಕೊಲೆ ಮಾಡಿ ಮಕ್ಕಳನ್ನು ಅನಾಥ ಮಾಡೋದು, ತಂದೆ ತಾಯಿ ಅನಾಥ ಮಾಡೋದು ನೀವು ಜೈಲಿಗೆ ಹೋಗೋದು ಯಾರಿಗೆ ಬೇಕು ಈ ಜೀವನ? ಕಾನೂನಿನಲ್ಲಿ ನಿಮಗೆ ಅವಕಾಶ ಇದೆ ಗಂಡನಿಗೆ ಡೈವರ್ಸ್ ಕೊಟ್ಟು ಹೋಗಿ ಆದ್ರೆ ಕೊಲೆ ಮಾಡಬೇಡಿ ಎಂದ ಕರವೇ ಮುಖಂಡ. ಪ್ರಿಯಕರನ ಜೊತೆ ಸೇರಿ ಕಟ್ಟಿಕೊಂಡ ಗಂಡನನ್ನೆ ಕೊಂದಿದ್ದ ಪತ್ನಿ ಪತ್ನಿ ಸಂಧ್ಯಾ, ಸ್ನೇಹಿತ ಬಾಳು ಬಿರಂಜೆ ಸೇರಿ ನಾಲ್ವರು ರಮೇಶ್ ಕಾಂಬಳೆ ಹತ್ಯೆ ಮಾಡಿದ್ರು
ಬೆಳಗಾವಿಯ ಅಂಬೇಡ್ಕರ ನಗರ ನಿವಾಸಿಯಾಗಿದ್ದ ರಮೇಶ್ ಕಾಂಬಳೆ ತನ್ನ ಪ್ರಿಯಕರ ಬಾಳು ಬಿರಂಜೆ ಜತೆ ಸೇರಿ ರಮೇಶ ಕೊಲೆ ಮಾಡಿದ್ದ ಪತ್ನಿ ಸಂಧ್ಯಾ ಕಾಂಬಳೆ ಮಾರ್ಚ್ 23ರಂದು ಕೊಲೆ ಮಾಡಿ ಚೋರ್ಲಾ ಘಾಟ್‌ಗೆ ಶವ ಎಸೆದಿದ್ದ ಕಿರಾತಕ ಪತ್ನಿ ಹಾಗೂ ಆಕೆಯ ಪ್ರಿಯಕರ ಘಟನೆ ನಡೆದು ಮೂರು ತಿಂಗಳ ಬಳಿಕ ಕೊಲೆ ರಹಸ್ಯ ಬಯಲಾಗಿತ್ತು
ಕೊಲೆ ಮಾಡಿದ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಲು ಒತ್ತಾಯ ರಮೇಶ್ ಕಾಂಬಳೆ ತಂದೆ ತಾಯಿಗೆ ವಯಸ್ಸಾಗಿದ್ದು ಇಬ್ಬರು ಪುತ್ರಿಯರಿದ್ದಾರೆ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿ ರಮೇಶ್‌ನ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡುವಂತೆ ಮನವಿ ರಮೇಶ ಕೊಂದವರನ್ನು ಗಲ್ಲಿಗೇರಿಸಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ
ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ ಹೋರಾಟಗಾರರು ಹಾಗೂ ಕೊಲೆಯಾದ ರಮೇಶ್ ಕುಟುಂಬಸ್ಥರು