ಉ.ಕ ಸುದ್ದಿಜಾಲ ಕೋಲಾರ :
ಅನ್ಯಜಾತಿಯ ಯುವಕನನ್ನು ಪ್ರೀತಿಸುತಿದ್ದ ಪುತ್ರಿ, ಹೆತ್ತ ಮಗಳನ್ನೆ ಕತ್ತು ಹಿಸುಕಿ ಕೊಂದ ತಂದೆ ಪ್ರಿಯತಮೆಯ ಸಾವಿನ ಸುದ್ದಿ ಕೇಳಿ ಪ್ರಿಯಕರ ರೈಲಿಗೆ ಸಿಲುಕಿ ಆತ್ಮಹತ್ಯೆ ಕೋಲಾರದ ಬಂಗಾರಪೇಟೆ ತಾಲೂಕಿನ ಗ್ರಾಮದಲ್ಲಿ ಇಂತದೊಂದು ಘಟನೆ ನಡೆದಿದೆ.
ಕಾಮಸಮುದ್ರ ಪೋಲೀಸ್ ಠಾಣೆ ವ್ಯಾಪ್ತಿಯ ಬೋಡಗುರ್ಕಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕೀರ್ತಿ(20) ಮತ್ತು ಗಂಗಾಧರ್(24) ಸಾವನ್ನಪ್ಪಿದ ಪ್ರೇಮಿಗಳು ಗಂಗಾಧರನನ್ನ ಮರೆತುಬಿಡುವಂತೆ ಮಗಳಿಗೆ ತಂದೆಯಿಂದ ಹಲವು ಸಲ ಬುದ್ದಿವಾದ ಹೇಳಲಾಗಿತ್ತು, ಪೋಷಕರ ಮಾತನ್ನು ಕೇಳದ ಪ್ರೇಮಿಗಳು.
ಸಿಟ್ಟಿಗೆದ್ದು ಮಗಳ ಕತ್ತು ಹಿಸುಕಿ ಕೊಂದಿರುವ ಕೀರ್ತಿ ಅಪ್ಪ ಕೃಷ್ಣಮೂರ್ತಿ ಕೀರ್ತಿ ಸಾವಿನ ವಿಷಯ ತಿಳಿದು ಗಂಗಾಧರ್ ಆತ್ಮಹತ್ಯೆ ಮಗಳನ್ನು ಕೊಂದ ಅಪ್ಪನಿಂದ ಮರ್ಯಾದಾ ಹತ್ಯೆ ಸದ್ಯ ವಿಷಯ ಹೆಚ್ಚು ಪ್ರಚಾರ ಪಡೆಯದಂತೆ ಎಚ್ಚರಿಕೆ ವಹಿಸಿದ್ದರು.
ತಡವಾಗಿ ಮುನ್ನಲೆಗೆ ಬಂದ ಪ್ರೇಮಿಗಳ ಸಾವು ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಕೃಷ್ಣಮೂರ್ತಿಯನ್ನು ಬಂಧಿಸಿರುವ ಪೋಲೀಸರು.