ಉ.ಕ ಸುದ್ದಿಜಾಲ ಕಾಗವಾಡ :
ಬೆಳಗಾವಿ ಜಿಲ್ಲೆಯ ಕಾಗವಾಡ ಸ್ವಂತ ನ್ಯಾಯಾಲಯದ ಕಟ್ಟಡಕ್ಕಾಗಿ ನ್ಯಾಯವಾದಿಗಳ ಸಂಘದಿಂದ ಕಳೆದ ಮೂರು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ.
ಸದ್ಯ ಕಾಗವಾಡ ಎಪಿಎಮ್‌ಸಿ ಆವರಣದ ಹಳೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಾಲಯ. ಅನಿರ್ದಿಷ್ಟ ಅವಧಿಯ ಪ್ರತಿಭಟನೆಗೆ ಮುಂದಾಗಿರುವ ನ್ಯಾಯವಾದಿಗಳು. ನೂರಕ್ಕು ಹೆಚ್ಚು ನ್ಯಾಯವಾದಿಗಳಿಂದ ರಸ್ತೆಗೆ ಇಳಿದು ಪ್ರತಿಭಟನೆ.
ಕಾಗವಾಡ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವ ನ್ಯಾಯವಾದಿಗಳು. ನ್ಯಾಯವಾದಿಗಳ ಪ್ರತಿಭಟನೆ ಸ್ಥಳಕ್ಕರ ಕಾಗವಾಡ ಶಾಸಕ ರಾಜು ಕಾಗೆ ಬೇಟಿ ನೀಡಿ ನ್ಯಾಯವಾದಿಗಳು ಮುಷ್ಕರ ನಡೆಸಿ ಬೇಡಿಕೆ ಇಟ್ಟಿರುವುದು ನ್ಯಾಯಯುತವಾಗಿದ್ದು ಅವರ ಬೇಡಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ.
ಆದರೆ, ಸರ್ಕಾರದ ಮಟ್ಟದಲ್ಲಾಗಬೇಕಾದ ಕಾರ್ಯಗಳಿಗೆ ಮುಷ್ಕರ ಒಂದೇ ಪರಿಹಾರವಲ್ಲ ನಿಮ್ಮ ಬೇಡಿಕೆಗೆ ಸರ್ಕಾರ ಮಟ್ಟದಲ್ಲಿ ಮುಖ್ಯಮಂತ್ರಿಗಳಿಗೆ, ಕಾನೂನು ಸಚಿವರಿಗೆ ಮತ್ತು ಎಪಿಎಂಸಿ ಸಚಿವರ ಗಮನಕ್ಕೆ ತಂದು ನ್ಯಾಯಾಲಯದ ಸ್ವಂತ ಸ್ಥಳ ಒದಗಿಸುವಲ್ಲಿ ಶ್ರಮಿಸುವುದಾಗಿ ಶಾಸಕ ರಾಜು ಕಾಗೆ ಹೇಳಿದರು.
ಸರ್ಕಾರ ಎಪಿಎಂಸಿಗೆ ಸ್ಥಳ ನೀಡಿದೆ ಅದು ಎಪಿಎಂಸಿಗೆ ಅವಶ್ಯಕತೆ ಇರುವುದಿಲ್ಲ ಕಳೆದ ಅನೇಕ ವರ್ಷಗಳಿಂದ ಅದು ಖಾಲಿ ಬಿದ್ದಿದೆ ಈಗ ಅದನ್ನು ಸರ್ಕಾರವೇ ಜಿಲ್ಲಾಧಿಕಾರಿಗಳ ಮೂಲಕ ಎಪಿಎಂಸಿಯಿಂದ ವಾಪಸ್ಸ ಪಡೆದು ನ್ಯಾಯಾಲಯ ಕಟ್ಟಡಕ್ಕೆ ನೀಡಬೇಕು
ಇದನ್ನು ಆದಷ್ಟು ಬೇಗನೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವಂತೆ ತಾವು ತಿಳಿಸುವುದಾಗಿ ಭರವಸೆ ನೀಡಿದರು. ಆದರೆ, ವಕೀಲರು ಮಾತ್ರ ಜಿಲ್ಲಾಧಿಕಾರಿಗಳೇ ಇಲ್ಲಿಗೆ ಬಂದು ಲಿಖಿತ ರೂಪದಲ್ಲಿ ಭರವಸೆ ನೀಡಿದಾಗ ಮಾತ್ರ ನಾವು ಮುಷ್ಕರ ಹಿಂಪಡೆಯುತ್ತೇವೆ ಅಲ್ಲಿಯ ವರೆಗೆ ಹೋರಾಟವನ್ನು ಇನ್ನಷ್ಟು ತೀವೃಗೊಳಿಸುತ್ತೇವೆ ಎಂದು ಪಟ್ಟು ಹಿಡಿದು ಮುಷ್ಕರ ಮುಂದುವರೆಸಿದರು.
ಇನ್ನೂ ವಕೀಲರ ಮುಷ್ಕರಕ್ಕ ತಾಲೂಕಿನ ಎಲ್ಲ ಸಂಘ-ಸಂಸ್ಥೆಗಳು,ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿ ಸದಸ್ಯರುಗಳಿಂದ ಬೆಂಬಲ ವ್ಯಕ್ತಗಾಗುತ್ತಿದ್ದು ವಕೀಲರ ಆತ್ಮಸ್ಥೆರ್ಯವನ್ನು ಹೆಚ್ಚಿಸಿದೆ.
ಈ ಸಮಯದಲ್ಲಿ ಮುಖಂಡರಾದ ಜ್ಯೋತಿಕುಮಾರ ಪಾಟೀಲ, ರಮೇಶ ಚೌಗುಲೆ,ಚಿದಾನಂದ ಅವಟಿ,ಕಾಕಾ ಪಾಟೀಲ, ಶಾಂತಿನಾಥ ಕರವ, ಕಾಕಾಸಾಬ ಪಾಟೀಲ, ಉಮೇಶ ಪಾಟೀಲ, ಸುಭಾಷ ಡಾಲೆ, ವಿಜಯ ಅಕಿವಾಟೆ, ವಕೀಲರ ಸಂಘದ ಅಧ್ಯಕ್ಷ ಪಿ.ಎ. ಮಾನೆ,ಉಪಾಧ್ಯಕ್ಷ ಬಿ ಎ ಮಗದುಮ್ಮ,ಹಿರಿಯ ವಕೀಲರಾದ ಅಭಯಕುಮಾರ ಅಕಿವಾಟೆ,ಬಾಬಾಸಾಬ ಗಣೆ, ಅರವಿಂದ ಭಂಡಾರೆ ಸೇರಿದಂತೆ ಅನೇಕ ವಕೀಲರು ಇದ್ದರು.