ಉ.ಕ ಸುದ್ದಿಜಾಲ ರಾಯಬಾಗ :
ನಿನ್ನೆ ರಾತ್ರಿ ಇಬ್ಬರು ಗೆಳೆಯರು ಕೂಡಿ ಪಾರ್ಟಿ ಮಾಡಿದ್ದಾರಂತೆ, ಆದರೆ ಬೆಳಿಗ್ಗೆ ನೋಡಿದರೆ ಗೆಳೆಯನ ಕುತ್ತಿಗೆ ಭಾಗದಲ್ಲಿ ಚಾಕು ಇರಿಯಲಾಗಿದೆ ಇದು ಕೊಲೆಯೊ ಅಥವಾ ಆತ್ಮಹತ್ಯೆ ಎನ್ನುವುದು ಪೋಲಿಸ್ ತನಿಖೆ ಬಳಿಕ ತಿಳಿಯಬೇಕಿದೆ.
ಹೌದು ಇಂದು ಬೆಳಂ ಬೆಳಿಗ್ಗೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದು ಹೋಗಿದೆ. ಪರಮಾನಂದವಾಡಿ ಗ್ರಾಮದ ಮಹೇಶ(ಗುಂಡು) ರಾಜು ಪಟ್ಟಣಕೂಡಿ(26) ಎಂಬ ಯುವಕನಿಗೆ ಕತ್ತಿಗೆ ಭಾಗದಲ್ಲಿ ಚಾಕು ಇರದಿದ್ದರ ಪರಿಣಾಮ ಮಹೇಶ ಸಾವನಪ್ಪಿದ್ದಾನೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ಮಹೇಶನನ್ನ ಕೊಲೆ ಮಾಡಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದ ಮಹೇಶನ ಸಹೋದರ ಉಮೇಶ ನಿನ್ನೆ ರಾತ್ರಿ ಮಹೇಶ ಹಾಗೂ ಆತನ ಗೆಳೆಯ ಬೆನೂರ ರಮೇಶ ಕೂಡಿ ಪಾರ್ಟಿ ಮಾಡಿದ್ದಾರೆ ನಿನ್ನೆ ಇಬ್ಬರೂ ಸಹ ಮದ್ಯ ಸೇವನೆ ಮಾಡಿದ್ದರಂತೆ
ನನ್ನ ಸಹೋದರ ಮಹೇಶನನ್ನ ರಮೇಶ ಕೊಲೆ ಮಾಡಿದ್ದಾನೆ ಎಂದು ಸಂಶಯ ವ್ಯಕ್ತಪಡಿಸಿದ ಸಹೋದರ ಉಮೇಶ ಮಹೇಶನನ್ನ ಯಾರಾದರು ಚಾಕುವಿನಿಂದ ಕೊಲೆ ಮಾಡಿದ್ದಾರೊ ಮಹೇಶನೆ ಚಾಕುವಿನಿಂದ ಚುಚ್ಚಿ ಕೊಂಡಿದ್ದಾನೊ ಪೊಲಿಸ್ ತನಿಖೆ ಬಳಿಕ ಸತ್ಯ ತಿಳಿಯಲಿದ
ಸ್ಥಳಕ್ಕೆ ಕುಡಚಿ ಪೋಲಿಸರು ಬೇಟಿ ನೀಡಿ ಪರಶೀಲನೆ ನಡೆಸಿದ್ದಾರೆ. ಕುಡಚಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ