ಉ.ಕ ಸುದ್ದಿಜಾಲ ಧಾರವಾಡ :

ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯವರು ಬೇರೆ ಬೇರೆ ರೀತಿಯಲ್ಲಿ ಬೈಯ್ಯುತ್ತಾರೆ. ಹಿಗ್ಗಾಮುಗ್ಗಾ ನಮ್ಮ ಬಗ್ಗೆ ಇಲ್ಲ ಸಲ್ಲದ ಮಾತು ಹೇಳುತ್ತಾರೆ ಜನರೂ ಸಹ ಕಾಂಗ್ರೆಸ್ ಅರ್ಥ ಮಾಡಿಕೊಳ್ಳುತ್ತಿಲ್ಲ ಕಾಂಗ್ರೆಸ್ ಪಕ್ಷವನ್ನು ಹಿಂದೂಗಳು ದೊಡ್ಡ ಪ್ರಮಾಣದಲ್ಲಿ ಅರ್ಥ ಮಾಡಿಕೊಳ್ಳಬೇಕು ಎಂದು ಧಾರವಾಡದಲ್ಲಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.

ಹಿಂದೂ ಎಂಬ ಪದ ತಂದಿದ್ದು ಕಾಂಗ್ರೆಸ್ ಪಕ್ಷ ಸಚಿಚ ಸಂತೋಷ ಲಾಡ ಹೇಳಿಕೆ

ಧಾರವಾಡದಲ್ಲಿ ತೊಗಲು ಗೊಂಬೆಯಾಟದ ಉತ್ಸವ ಉದ್ಘಾಟಿಸಿ ಭಾಷಣ ಮಾಡಿದ ಸಂತೋಷ ಲಾಡ ಹಿಂದೂ ಎಂಬ ಪದ ತಂದಿದ್ದು ಕಾಂಗ್ರೆಸ್ ಪಕ್ಷ. ಈ ದೇಶದಲ್ಲಿ ಹಿಂದೂ ಎಂಬ ಪದ ಇರಲಿಲ್ಲ. ಡಾ. ಅಂಬೇಡ್ಕರರು ಹಿಂದು ಕೋಡಿಬಿಕೇಷನ್ ಬಿಲ್ ತಂದರು ಅದು ತರದಿದ್ದರೆ ನಾವು ಹೀಗೆ ಇರ್ತಾ ಇರಲಿಲ್ಲ.

ಶೂದ್ರರನ್ನು ಕರೆಯಿರಿ, ಬ್ರಾಹ್ಮಣ, ವೈಷ್ಯರನ್ನು ಕರೆಯಿಸಿ ಎಂಬ ವ್ಯವಸ್ಥೆ ಇರುತ್ತಿತ್ತು. ಇತಿಹಾಸವನ್ನು ಜನ ಓದುವುದಿಲ್ಲ ಮಾಧ್ಯಮಗಳ ಮೂಲ‌ಕ ಸುಳ್ಳು ಹೇಳುವುದೇ ಇವತ್ತಿನ ರಾಜಕಾರಣದಲ್ಲಿ ನಡೆದಿದೆ ಎಂದು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸಚಿವ ಸಂತೋಷ ಲಾಡ.