ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ – ಉಪಮೇಯರ್ ಚುನಾವಣೆ ನಡೆದಿದ್ದು ಬೆಳಗಾವಿ ಪಾಲಿಕೆ ನೂತನ ಮೇಯರ್ ಆಗಿ ಸವಿತಾ ಕಾಂಬಳೆ ಆಯ್ಕೆಯಾಗಿದ್ದಾರೆ.

ವಾರ್ಡ್ ನಂ.17ರ ಬಿಜೆಪಿ ಸದಸ್ಯೆ ಸವಿತಾ ಅವಿರೋಧ ಆಯ್ಕೆಯಾಗಿದ್ದಾರೆ. ಸಾಮಾನ್ಯ ಕಾರ್ಮಿಕ ದಲಿತ ಮಹಿಳೆಗೆ ಒಲಿದ ಮೇಯರ್ ಹುದ್ಧೆ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ಧ ಲಕ್ಷ್ಮೀ ರಾಠೋಡ್ ನಾಮಪತ್ರ ವಾಪಸ್ ಪಡೆದಿದ್ದಾರೆ. ಮೇಯರ್ ಆಯ್ಕೆ ಅಧಿಕೃತ ಘೋಷಣೆ ಮಾಡಿದ ಪ್ರಾದೇಶಿಕ ಅಯುಕ್ತ ಸಂಜಯ್ ಶೆಟ್ಟೆನ್ನವರ.

ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆ ಉಪಮೇಯರ್ ಆಗಿ ಬಿಜೆಪಿಯ ಆನಂದ ಚವ್ಹಾಣ ಅಯ್ಕೆ ಬೆಳಗಾವಿ ವಾರ್ಡ್ ನಂ.44ರ ಬಿಜೆಪಿ ಸದಸ್ಯ ಆನಂದ ಚವ್ಹಾಣ ಆನಂದ ಚವ್ಹಾಣಗೆ ತಮ್ಮ ಪ್ರತಿಸ್ಪರ್ಧಿ ವಿರುದ್ಧ  39 ಮತ ಪಡೆದು ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿ ಕಡೋಲ್ಕರ್ 20 ಮತ ಪಡೆದು ಸೋಲು ಅನುಭವಿಸಿದ್ದಾರೆ. ಮೇಯರ್ – ಉಪಮೇರ್ ಗೆಲ್ಲುತ್ತಿದ್ದಂತೆ ಜೈ ಶ್ರೀರಾಮ ಘೋಷಣೆ ಕೂಗಿದ ಬಿಜೆಪಿ ಸದಸ್ಯರು.