ಉ.ಕ ಸುದ್ದಿಜಾಲ ಅಥಣಿ :
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಸಾಲದ ಕೂಪಕ್ಕೆ ರೈತನೊಬ್ಬ ಆತ್ಮ ಹತ್ಯೆಗೆ ಶರಣಾಗಿದ್ದು ರೈತನ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಅಪ್ಪಾಸಾಬ ಗಜಾನನ ಕೋಳಿ (40) ಮೃತ ದುರ್ದೈವಿ ಯಾಗಿದ್ದು ಕೃಷಿ ಸಂಬಂದಿತ 6 ಲಕ್ಷ ಸಾಲ ಮಾಡಿ ತೀರಲು ಆಗದೆ ಮನನೊಂದು ಕಳೆದ ಎರಡುಬದಿನದ ಹಿಂದೆ ಬೆಳಿಗ್ಗೆ ತೋಟದ ಮನೆಯಲ್ಲಿದ್ದ ರಾಸಾಯನಿಕ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದ್ದ.
ಮಾಹಿತಿ ತಿಳಿದ ಕುಟುಂಬಸ್ಥರು ಆತನನ್ನ ಚಿಕಿತ್ಸೆಗಾಗಿ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಅಥಣಿಯಲ್ಲಿ ಗಂಭೀರ ಸ್ಥಿತಿ ಗಮನಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆಂದು ಮಿರಜ್ ಆಸ್ಪತ್ರೆಗೆ ಚಿಕಿತ್ಸೆ ಸೂಚನೆ ನೀಡಿದ್ದಾರೆ.
ವೈದ್ಯರ ಸಲಹೆಯಂತೆ ಮಿರಜ್ ಸಿವಿಲ್ ಆಸ್ಪತ್ರೆಗೆ ರವಾನಿಸಿದ್ದಾರೆ ದಿನಾಂಕ ಇಂದು ನಸುಕಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಮೃತ ರೈತ ಅಪ್ಪಸಾಬ ಎರಡು ಹೆಣ್ಣು ಮಕ್ಕಳು ಪತ್ನಿ ತಾಯಿ ತಂದೆ ಅಪಾರ ಬಂದು ಬಳಗವನ್ನ ಬಿಟ್ಟು ಅಗಲಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಸಾಲದ ಕೂಪಕ್ಕೆ ರೈತನೊಬ್ಬ ಆತ್ಮ ಹತ್ಯೆಗೆ ಶರಣು