ಉ.ಕ ಸುದ್ದಿಜಾಲ ಚಿತ್ರದುರ್ಗ :

ಗೆಳತಿ ಸೈಕಲ್ ಕೊಡದ ಹಿನ್ನಲೆ 11 ವರ್ಷದ ಬಾಲಕಿ ನೇಣಿಗೆ ಶರಣು. ಸ್ಪಂದನ (11) ನೇಣು ಬಿಗಿದುಕೊಂಡು ಆತ್ಮಹತ್ಯೆ. ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಹರಿಶ್ಚಂದ್ರ ಘಾಟ್ ಬಡಾವಣೆಯಲ್ಲಿ ಘಟನೆ.

ರುದ್ರಮ್ಮ ಶ್ರೀನಿವಾಸ್ ಎಂಬ ದಂಪತಿಯ ಪುತ್ರಿ ಸ್ಪಂಧನ. ಮಧ್ಯಹ್ನ ಗೆಳತಿ ಜೊತೆ ಸೈಕಲ್ ನಲ್ಲಿ ಆಟವಾಡುತ್ತಿದ್ದ ಸ್ಪಂದನ. ತಾನು ಸೈಕಲ್ ಓಡಿಸುವೆ ಕೊಡು ಎಂದು ಕೇಳಿದಾಗ ನಿರಾಕರಿಸಿದ್ದ ಗೆಳತಿ. ಸೈಕಲ್ ಕೊಡದಿದ್ದಕ್ಕೆ ನೇಣು ಹಾಕಿಕೊಳ್ಳುವೆ ಎಂದು ಹೋಗಿ ಆತ್ಮಹತ್ಯೆಗೆ ಶರಣು

ಮನೆಯಲ್ಲಿ ಯಾರು ಇಲ್ಲದಾಗ ಬಾಗಿಲು ಹಾಕಿಕೊಂಡು ಆತ್ಮಹತ್ಯೆ. ಬಾಲಕಿಯ ಮನುಸಿನ ಆತ್ಮಹತ್ಯೆ ಕಂಡು ಸ್ಥಳಿಯರಿಗೆ ಆಶ್ಚರ್ಯ. ಸ್ಥಳಕ್ಕೆ DYSP ಶಿವಕುಮಾರ್, CPI ರಾಘವೇಂದ್ರ ಕಾಂಡಿಕೆ ಭೇಟಿ ಪರಿಶೀಲನೆ. ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.