ಉ.ಕ ಸುದ್ದಿಜಾಲ ರಾಯಚೂರ :
ಸಾಲ ಕಟ್ಟಿಲ್ಲ ಎಂಬ ಒಂದೇ ಕಾರಣಕ್ಕೆ ವ್ಯಕ್ತಿಯೋರ್ವ ಮಣ್ಣೆತ್ತಿನ ಅಮಾವಾಸ್ಯೆ ದಿನವೇ ರೈತ ದಂಪತಿಯ ಎತ್ತುಗಳನ್ನು ಹೊಡೆದುಕೊಂಡು ಹೋಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದಲ್ಲಿ ಘಟನೆ ನಡೆದಿದೆ. ಮಸರಕಲ್ ಗ್ರಾಮದ ಮರಿಯಪ್ಪ ಹಾಗೂ ಮರಿಯಮ್ಮ ದಂಪತಿ ಕೃಷಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ರೈತ ದಂಪತಿ ಬಿತ್ತನೆ ಕಾರ್ಯ ಆರಂಭಿಸುವ ತವಕದಲ್ಲಿದ್ದರು. ಆದರೆ, ಸಾಲ ತೀರಿಸಿಲ್ಲ ಅಂತ ಜಯಪ್ಪ ಎಂಬುವರು ಈ ರೈತ ದಂಪತಿಗೆ ಸೇರಿದ ಜೋಡೆತ್ತುಗಳನ್ನು ಹೊಡೆದುಕೊಂಡು ಹೋಗಿದ್ದಾರೆ. ಈ ದಂಪತಿಗೆ ಜಯಪ್ಪ ಐದು ವರ್ಷಗಳ ಹಿಂದೆ ಕರಾರು ಪತ್ರದ ಮೂಲಕ ಬಡ್ಡಿ ಆಧಾರದಲ್ಲಿ ಒಂದು ಲಕ್ಷ ಸಾಲ ಕೊಟ್ಟಿದ್ದರು.
ದಂಪತಿ ಪ್ರತಿ ವರ್ಷ ಸಮಯಕ್ಕೆ ಸರಿಯಾಗಿ ಬಡ್ಡಿ ಕಟ್ಟುತ್ತಲೇ ಬಂದಿದ್ದರು. ಆದರೆ, ಈ ವರ್ಷ ಸ್ವಲ್ಪ ಹಣವನ್ನು ರೈತ ಮರಿಯಪ್ಪ, ತುರ್ತು ಪರಿಸ್ಥಿತಿ ಇದೆ ಅಂತ ತನ್ನ ಸಂಬಂಧಿಯ ಓರ್ವ ಮಹಿಳೆಗೆ ನೀಡಿದ್ದಾರೆ. ಮಹಿಳೆ ಹಣ ವಾಪಸ್ ನೀಡುವಲ್ಲಿ ತಡ ಮಾಡಿದ್ದಾರೆ. ಈ ವಿಚಾರವನ್ನು ಮರಿಯಪ್ಪ ಜಯಪ್ಪಗೆ ತಿಳಿಸಿದ್ದಾರೆ.
ಆದರೂ ಕೂಡ ಜಯಪ್ಪ ರೈತ ದಂಪತಿಯ ಒಂದುವರೆ ಲಕ್ಷ ಮೌಲ್ಯದ ಜೋಡೆತ್ತುಗಳನ್ನು ಹೊಡೆದುಕೊಂಡು ಹೋಗಿದ್ದಾರೆ. ಆಗ, ರೈತ ದಂಪತಿ ಎತ್ತುಗಳನ್ನು ಕೊಡಿಸಿ ಅಂತ ಗಬ್ಬೂರು ಪೊಲೀಸ್ ಠಾಣೆಗೆ ಹೋಗಿದ್ದಾರೆ.
ಆದರೆ, ಠಾಣೆಯಲ್ಲಿ ರೈತ ದಂಪತಿಗೆ ಸೂಕ್ತ ಸ್ಪಂದನೆ ದೊರೆಯುವುದಿಲ್ಲ. ಅದಕ್ಕೆ, ರೈತ ದಂಪತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಕದ ತಟ್ಟಿದ್ದಾರೆ.
ಕೊನೆಗೆ, ಹಿರಿಯ ಅಧಿಕಾರಿಗಳ ಸೂಚನೆ ಮೆರೆಗೆ ಗಬ್ಬೂರು ಪೊಲೀಸರು ಜಯಪ್ಪಗೆ ಎಚ್ಚರಿಕೆ ನೀಡಿ ಎತ್ತುಗಳನ್ನು ವಾಪಸ್ ಕೊಡಿಸಿದ್ದಾರೆ. ಎತ್ತುಗಳು ವಾಪಸ್ ಮನೆಗೆ ಬಂದಿದ್ದು, ರೈತ ದಂಪತಿ ನಿಟ್ಟುಸಿರು ಬಿಟ್ಟಿದ್ದಾರೆ.
ಸಾಲ ಕಟ್ಟಿಲ್ಲ ಎಂಬ ಒಂದೇ ಕಾರಣಕ್ಕೆ ಮಣ್ಣೆತ್ತಿನ ಅಮಾವಾಸ್ಯೆ ದಿನವೇ ಎತ್ತುಗಳನ್ನ ಹೊತ್ತೊಯ್ದ ಸಾಲ ನೀಡಿದವ
